Kannada Duniya

ರಾಶಿಗನುಗುಣವಾಗಿ ನಿಮ್ಮ ಸಂಗಾತಿಯ ಸ್ವಭಾವವೇನು ಎಂಬುದನ್ನು ತಿಳಿದುಕೊಳ್ಳಿ…!

ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವ ಸಂಗಾತಿಯ ಬಗ್ಗೆ ಒಂದಷ್ಟು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ.ತನಗೆ ಯಾವ ರೀತಿಯ ಸಂಗಾತಿ ಸಿಗಬಹುದು ಎಂಬ ಕುತೂಹಲ ಕೂಡ ಇರುತ್ತದೆ. ಜಾತಕದಲ್ಲಿ ಏಳನೇ ಮನೆ ಮದುವೆಗೆ ಸಂಬಂಧಪಟ್ಟಿದ್ದು, ನೀವು ಯಾವ ಸ್ವಭಾವದ ಸಂಗಾತಿಯನ್ನು ಪಡೆಯುತ್ತೀರಿ ಎಂಬುದನ್ನು ತಿಳಿಯಬಹುದು.

ಮೇಷ : ನಿಮ್ಮ ಸಂಗಾತಿಯು ಭೂ ಕಟ್ಟಡದ ಮಾಲೀಕರಾಗುತ್ತಾರೆ. ನಿಮ್ಮ ವೈವಾಹಿಕ ಜೀವನದಲ್ಲಿ ಹಣಕಾಸಿನ ತೊಂದರೆ ಎದುರಿಸಬೇಕಾಗುತ್ತದೆ. ನಿಮ್ಮ ಸಂಗಾತಿ ಗಂಭೀರವಾಗಿರುತ್ತಾರೆ.

ವೃಷಭ : ಇವರು ಸುಂದರವಾದ ಮತ್ತು ಉತ್ತಮ ಗುಣಗಳುಳ್ಳ ಜೀವನ ಸಂಗಾತಿಯನ್ನು ಪಡೆಯುತ್ತಾರೆ. ನಿಮ್ಮ ಸಂಗಾತಿ ನೀವು ಹೇಳುವ ಮಾತನ್ನು ಕೇಳುತ್ತಾರೆ.

ಮಿಥುನ : ನಿಮ್ಮ ಸಂಗಾತಿ ಉತ್ತಮವಾದ ಆಲೋಚನಾಶಕ್ತಿಯನ್ನು ಹೊಂದಿರುತ್ತಾರೆ ಮತ್ತು ಸ್ವಲ್ಪ ಕೋಪ ಹೆಚ್ಚಾಗಿರುತ್ತದೆ.

ಕಟಕ : ನಿಮ್ಮ ಜೀವನ ಸಂಗಾತಿ ಸುಂದರವಾಗಿರುತ್ತಾರೆ ಮತ್ತು ಸಾಕಷ್ಟು ಪ್ರಾಮಾಣಿಕವಾಗಿರುತ್ತಾರೆ.

ಸಿಂಹ : ನಿಮ್ಮ ಮನವೊಲಿಸುವಂತಹ ಸಂಗಾತಿಯನ್ನು ನೀವು ಪಡೆಯುತ್ತೀರಿ. ಹಾಗೂ ಅವರು ಹಠಮಾರಿಯಾಗಿರುತ್ತಾರೆ.

ಕನ್ಯಾ : ಸುಂದರವಾದ, ಪ್ರತಿಭಾವಂತ ಸಂಗಾತಿಯನ್ನು ಪಡೆಯುತ್ತಾರೆ. ಮದುವೆಯ ಬಳಿಕ ನಿಮ್ಮ ಜೀವನ ಉತ್ತಮವಾಗಿರುತ್ತದೆ.

ತುಲಾ : ನಿಮ್ಮ ಸಂಗಾತಿ ವಿದ್ಯಾವಂತರಾಗಿದ್ದು, ಸುಂದರವಾಗಿರುತ್ತಾರೆ. ನಿಮ್ಮ ಸಂಗಾತಿ ಯಾವಾಗಲೂ ನಿಮ್ಮನ್ನು ಬೆಂಬಲಿಸುತ್ತಾರೆ.

ವೃಶ್ಚಿಕ : ತುಂಬಾ ಕಾಳಜಿ ತೋರಿಸುವಂತಹ ಸಂಗಾತಿಯನ್ನು ಪಡೆಯುತ್ತಾರೆ. ನಿಮ್ಮ ಸಂಗಾತಿ ತುಂಬಾ ಶ್ರಮಜೀವಿಯಾಗಿರುತ್ತಾರೆ.

ಧನು : ನಿಮ್ಮ ಸಂಗಾತಿ ಸ್ವಾಭಿಮಾನಿಯಾಗಿರುತ್ತಾರೆ. ನಿಮ್ಮ ಕುಟುಂಬದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ.

ಮಕರ : ನಿಮ್ಮ ಸಂಗಾತಿ ಆಸ್ತಿಕರಾಗಿರುತ್ತಾರೆ. ದೇವರ ಬಗ್ಗೆ ನಂಬಿಕೆ ಭಕ್ತಿ ಅಧಿಕವಾಗಿರುತ್ತದೆ. ಯಾವಾಗಲೂ ಪೂಜೆ ವ್ರತಗಳಲ್ಲಿ ಮಗ್ನರಾಗಿರುತ್ತಾರೆ.

ಕುಂಭ : ನಿಮ್ಮ ಸಂಗಾತಿ ವಿಶ್ವಾಸಾರ್ಹ ಮತ್ತು ಗಂಭೀರ ಸ್ವಭಾವದವರಾಗಿರುತ್ತಾರೆ.

ಮೀನ : ನಿಮ್ಮ ಸಂಗಾತಿ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಉತ್ತಮ ಗುಣಗಳನ್ನು ಹೊಂದಿರುತ್ತಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...