Kannada Duniya

ನಿಮ್ಮ ಸಂಸಾರಿಕ ಜೀವನ ಖುಷಿಯಿಂದ ಇರಬೇಕೆ….? ಹಾಗಾದ್ರೆ ವಯಸ್ಸಿನ ಅಂತರ ಹೀಗಿರಲಿ!

ಡೇಟಿಂಗ್ ನಲ್ಲಿ ಇರುವವರು ಬ್ರೇಕಪ್ ಮಾಡಿಕೊಳ್ಳುವುದು, ವಿವಾಹವಾದವರು ಡಿವೋರ್ಸ್ ತೆಗೆದುಕೊಳ್ಳುವುದು ಈಗ ಬಹು ಸರಳವಾದ ಸಂಗತಿಯಾಗಿದೆ. ಹೀಗಾಗದೆ ಸಂಬಂಧಗಳು ಸುದೀರ್ಘ ಕಾಲ ಚೆನ್ನಾಗಿರಬೇಕು ಎಂದರೆ ಸಂಗಾತಿಗಳ ಮಧ್ಯೆ ಒಂದಷ್ಟು ವಯಸ್ಸಿನ ಅಂತರ ಇರಬೇಕು ಎನ್ನುತ್ತವೆ ಕೆಲವು ಸಂಶೋಧನೆಗಳು.

ಹಿಂದಿನ ಕಾಲದಲ್ಲಿ ಒಂದೇ ವಯಸ್ಸಿನ ಹುಡುಗ-ಹುಡುಗಿಯರನ್ನು ಮನೆಮಂದಿ ಮದುವೆ ಮಾಡಿಸುತ್ತಿರಲಿಲ್ಲ. ಇಬ್ಬರ ಮಧ್ಯೆ ಕನಿಷ್ಠ 5-6 ವರ್ಷ ಅಂತರವಿರುವಂತೆ ನೋಡಿಕೊಳ್ಳುತ್ತಿದ್ದರು. ಈಗ ಲವ್ ಮ್ಯಾರೇಜ್ ನಲ್ಲಿ ಅದ್ಯಾವುದು ಪರಿಗಣನೆಗೆ ಬರುವುದಿಲ್ಲ.

ಅಧ್ಯಯನವೊಂದರ ಪ್ರಕಾರ 0-3 ವರ್ಷ ವಯಸ್ಸಿನ ಅಂತರವಿರುವ ಸಂಗಾತಿಗಳ ಮಧ್ಯೆ ಕಡಿಮೆ ಪ್ರಮಾಣದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವಂತೆ. 4-6 ವರ್ಷ ವಯಸ್ಸಿನ ಅಂತರವಿರುವವರಲ್ಲಿ ಸಮಸ್ಯೆಗಳು ಕಂಡುಬಂದರೂ ಅವರು ಹೊಂದಾಣಿಕೆಯಿಂದ ಸಹಬಾಳ್ವೆ ಮಾಡುತ್ತಾರಂತೆ. ಅದೇ 7 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಂತರವಿರುವವರು ದಾಂಪತ್ಯದಲ್ಲಿ ಸಂತೃಪ್ತಿಯಿಂದ ಇರುವುದು ಕಡಿಮೆ ಎಂಬ ಅಂಶವನ್ನು ಈ ಅಧ್ಯಯನ ಹೊರಹಾಕಿದೆ.

ಸಂಬಂಧಗಳಲ್ಲಿ ಸಂಗಾತಿಗಳ ಮನಸ್ಥಿತಿ, ಅರ್ಥ ಮಾಡಿಕೊಳ್ಳುವ ಗುಣಗಳು ಹೆಚ್ಚು ಪ್ರಾಮುಖ್ಯತೆ ವಹಿಸುತ್ತದೆಯೇ ಹೊರತು ವಯಸ್ಸಲ್ಲ ಎಂಬ ಅಂಶವನ್ನೂ ಇದು ಹೊರಹಾಕಿದೆಯಂತೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...