Kannada Duniya

ಡೇಟಿಂಗ್ ತಪ್ಪಲ್ಲ… ಆದರೆ ಇದು ತಪ್ಪು!

ಡೇಟಿಂಗ್ ಈಗ ಕಾಮನ್ ಆಗಿದೆ. ಯಾರ ಬಾಯಲ್ಲಿಯೂ ಕೇಳಿದ್ರೂ ನಾವು ಡೇಟಿಂಗ್ ನಲ್ಲಿದ್ದೇವೆ ಎಂಬ ಮಾತು ಇರುತ್ತದೆ. ಈ ಡೇಟಿಂಗ್ ಗೆ ಕುರಿತಾದ ಒಂದಷ್ಟು ಮಾಹಿತಿ ಇಲ್ಲಿದೆ. ನೀವು ಡೇಟಿಂಗ್ ಗೆ ಹೊರಟಿದ್ದೀರಾ? ಹಾಗಿದ್ದರೆ ನಿಮ್ಮ ಸಂಗಾತಿಯ ಮುಂದೆ ಈ ಕೆಲವು ತಪ್ಪುಗಳನ್ನು ಮಾಡದಿರಿ.

ನೀವು ಡೇಟಿಂಗ್ ಅನ್ನು ತುಂಬಾ ಲಘುವಾಗಿ ಪರಿಗಣಿಸದಿರಿ. ಅದೇ ರೀತಿ ಯಾವುದೇ ರೀತಿಯ ನಟನೆಗೂ ಅವಕಾಶ ನೀಡದಿರಿ. ಅಂದರೆ ನಿಮ್ಮ ಸಂಗಾತಿಯ ಮುಂದೆ ನಟಿಸಿದರೆ ಕೆಲವೇ  ನಿಮಿಷಗಳಲ್ಲಿ  ಅವರಿಗದು ತಿಳಿದುಹೋಗುತ್ತದೆ. ಹಾಗಾಗಿ ನೀವು ನೀವಾಗಿರಿ.

ಮೊದಲ ಡೇಟಿಂಗ್ ವೇಳೆ ಹೂವುಗಳನ್ನು ಕೊಂಡೊಯ್ಯುವುದು ತಪ್ಪಲ್ಲ. ಅದು ಹಳೆಯ ಪದ್ಧತಿಯಾಗಿದ್ದರೂ ನಿಮ್ಮ ಸಂಗಾತಿಗೆ ಅದು ಇಷ್ಟವಾಗುತ್ತದೆ. ನೀವು ಅವರನ್ನು ಮೆಚ್ಚಿಸಲು ಪ್ರಯತ್ನಿಸುವುದು ಅವರಿಗೂ ತಿಳಿದಿರುತ್ತದೆ. ಹಾಗಾಗಿ ರೋಮ್ಯಾಂಟಿಕ್  ಆಗಿರಲು ಹೂವು ಕೊಂಡೊಯ್ಯಿರಿ.

ಸಾಧ್ಯವಾದಷ್ಟು ಕೂಲ್ ಆಗಿರಿ. ಸಂಗಾತಿಯ ಬಳಿ ಪದೇ ಪದೇ ಒಂದೇ ಪ್ರಶ್ನೆಯನ್ನು ಕೇಳುತ್ತಿರುವುದು ನಿಮ್ಮ ಅಶಾಂತತೆಯನ್ನು ತೋರಿಸುತ್ತದೆ. ಹಾಗಾಗಿ ಅವರ ಬಗ್ಗೆ ಹೆಚ್ಚು ಚಿಂತಿಸದೆ, ಪ್ರಶ್ನಿಸದೆ ಶಾಂತವಾಗಿರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...