Kannada Duniya

ಪತಿ ಪತ್ನಿಗೆ ಮೋಸ ಮಾಡುವುದಕ್ಕೆ ಕಾರಣಗಳು ಏನು ಗೊತ್ತಾ…?

ದಂಪತಿ ಮಧ್ಯೆ ಜಗಳ ಸಾಮಾನ್ಯವಾದರೂ ಕೆಲವೊಮ್ಮೆ ಪತಿ ಪತ್ನಿಗೆ ಮೋಸ ಮಾಡುವುದುಂಟು. ಇಲ್ಲಿ ತಾವು ಯಾವ ಕಾರಣಕ್ಕೆ ಪತ್ನಿಗೆ ಮೋಸ ಮಾಡಿದ್ದೇವೆ ಎಂಬುದನ್ನು ಪುರುಷರು ವಿವರಿಸಿದ್ದಾರೆ.

ಪತ್ನಿ ಬೆಲೆಬಾಳುವ ವಸ್ತುಗಳನ್ನೇ ಉಡುಗೊರೆಯಾಗಿ ಬಯಸುತ್ತಿದ್ದಳು, ಇದು ಕೆಲವೊಮ್ಮೆ ನಿಭಾಯಿಸಲು ಕಷ್ಟವಾಗುತ್ತಿತ್ತು. ಇದನ್ನು ಹೇಳಿಕೊಳ್ಳಲು ನಾಚಿಕೆಯಾಗಿ ನಾನು ಮೋಸ ಮಾಡಿದೆ ಎಂದು ಕೆಲವು ಪುರುಷರು ಹೇಳಿಕೊಂಡಿದ್ದಾರೆ.

ನಾನು ವಿವಾಹ ಪೂರ್ವ ಸಂಬಂಧಗಳ ಬಗ್ಗೆ ಎಲ್ಲವನ್ನೂ ಹೇಳಿಕೊಂಡಿದ್ದರೂ ಆಕೆ ನನ್ನಿಂದ ಎಲ್ಲವನ್ನೂ ಮುಚ್ಚಿಟ್ಟಳು. ಮದುವೆಯಾದ ಕೆಲವೇ ದಿನಗಳಲ್ಲಿ ಇದು ನನಗೆ ತಿಳಿದು ಬಂತು, ಹಾಗಾಗಿ ಪತ್ನಿಗೆ ಮೋಸ ಮಾಡುವುದು ಅನಿವಾರ್ಯವಾಯಿತು ಎಂಬುದು ಮತ್ತೆ ಕೆಲವು ಪುರುಷರ ನೋವಾಗಿತ್ತು.

ನನ್ನಾಕೆಗೆ ಸಾಮಾನ್ಯ ಜ್ಞಾನದ ಕೊರತೆಯಿದೆ. ಮನೆಯಲ್ಲಿ ಸಾಮಾನ್ಯರಂತೆ ಇದ್ದರೂ ಹೊರಹೋದಾಗ, ಗೆಳೆಯರೊಂದಿಗೆ ಬೆರೆತಾಗ, ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಾಗ ಪೆದ್ದಿಯಂತೆ ವರ್ತಿಸುತ್ತಾಳೆ. ಅವಳಿಗೆ ಹೊಂದಿಕೊಂಡು ಹೋಗುವ ಹಾಗೂ ಇತರರೊಡನೆ ಬೆರೆಯುವ ಗುಣವೇ ಇಲ್ಲ. ಹಾಗಾಗಿ ಆಕೆಯಿಂದ ನಾನು ದೂರವಾಗಬೇಕಾಯಿತು ಎಂಬುದು ಮತ್ತೆ ಕೆಲವರ ಅಭಿಪ್ರಾಯವಾಗಿತ್ತು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...