Kannada Duniya

ದಂಪತಿಗಳ ನಡುವಿನ ವೈಮನಸ್ಸಿಗೆ ಇವೇ ಮುಖ್ಯ ಕಾರಣವಂತೆ!

ಮದುವೆಯಾದ ಬಳಿಕ ಪ್ರತಿಯೊಬ್ಬ ದಂಪತಿಯೂ ಒಂದಿಲ್ಲೊಂದು ವಿಷಯಕ್ಕೆ ವೈಮನಸ್ಸು ಹೊಂದಬೇಕಾಗುತ್ತದಂತೆ. ಸಾಮಾನ್ಯವಾಗಿ ಅದಕ್ಕೆ ಈ ಕಾರಣಗಳೇ ಮುಖ್ಯವಾಗುತ್ತವೆ ಎಂದಿದೆ ಸಂಶೋಧನೆ.

ಪತಿ ಪತ್ನಿಯರ ನಡುವಿನ ಲೈಂಗಿಕ ಭಿನ್ನಾಭಿಪ್ರಾಯದಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಮಹಿಳೆಯರು ಮಗುವಾದ ಬಳಿಕ ದೈಹಿಕ ಅನ್ಯೋನ್ಯತೆ ಕಳೆದುಕೊಳ್ಳುತ್ತಾರೆ ಹಾಗೂ ಇದೇ ಮುಂದೆ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನಲಾಗಿದೆ.

ಅದೇ ರೀತಿ ನೀವು ಪ್ರೀತಿಸಿದ ವ್ಯಕ್ತಿಯನ್ನು ಬದಲಾಯಿಸಲು ಪ್ರಯತ್ನಿಸದಿರಿ. ಅವರು ಹೇಗೆ ಇದ್ದಾರೋ ಹಾಗೆಯೇ ಸ್ವೀಕರಿಸಿ. ಇದು ಅವರಿಗೆ ಕೋಪವುಂಟು ಮಾಡಬಹುದು ಹಾಗೂ ಮನಸ್ಥಾಪಕ್ಕೆಕಾರಣವಾಗಬಹುದು.

ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ನೀವಿಬ್ಬರೂ ಜೊತೆಯಾಗಿ ಇದನ್ನು ಹೇಗೆ ನಿಭಾಯಿಸುತ್ತೀರಿ ಎಂಬುದರ ಮೇಲೆ ಹಲವಾರು ಸಂಗತಿಗಳು ನಿರ್ಧಾರವಾಗುತ್ತವೆ. ಕೂಗಾಡಿ ಜಗಳವಾಡುವುದು ಕೂಡಾ ಸಂಬಂಧ ಹಾಳಾಗಲು ಕಾರಣವಾಗುವುದುಂಟು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...