Kannada Duniya

ಯಾವ ಆಹಾರ ಕೊಡುತ್ತಿದ್ದೀರಿ ಮಕ್ಕಳಿಗೆ ..?

ಮಗುವಿಗೆ ಆರು ತಿಂಗಳಾದ ಬಳಿಕ ಎದೆಹಾಲಿನ ಹೊರತಾದ ಆಹಾರ ನೀಡುವುದು ಬಹಳ ಮುಖ್ಯ. ಅಂತಹ ಸಂದರ್ಭದಲ್ಲಿ ನೀವು ಯಾವುದನ್ನು ಆಯ್ಕೆ ಮಾಡುತ್ತೀರಿ.ಮಕ್ಕಳಿಗೆ ಆರಂಭದಿಂದಲೇ ಮನೆಯ ಆಹಾರ ಅಥವಾ ಊಟವನ್ನು ಅಭ್ಯಾಸ ಮಾಡಿಸಿ.

ಔಷಧಾಲಯಗಳಲ್ಲಿ ಅಥವಾ ಮಳಿಗೆಗಳಲ್ಲಿ ಸಿಗುವ ಪ್ಯಾಕೆಟ್ ಫುಡ್ ಬಳಸುವುದಾದರೆ ಈ ಕೆಲವು ಅಂಶಗಳನ್ನು ಗಮನಿಸಲು ಮರೆಯಬೇಡಿ.

ನೀವು ಕೊಳ್ಳುವ ಪ್ಯಾಕೇಜ್ ತಯಾರಾದ ದಿನಾಂಕವನ್ನು ನೋಡಿ. ಹಲವು ತಿಂಗಳುಗಳಿಂದ ಅದು ಅಂಗಡಿಯಲ್ಲೇ ಇದ್ದಿರಬಹುದು. ಹಾಗಾಗಿ ಅದರ ತಯಾರಾದ ದಿನಾಂಕವನ್ನು ಸರಿಯಾಗಿ ನೋಡಿ.

ಒಮ್ಮೆ ಪ್ಯಾಕೆಡ್ ಫುಡ್ ನ ರುಚಿ ಹತ್ತಿಸಿಕೊಂಡ ಮಕ್ಕಳು ಮತ್ತೆ ಮನೆಯ ಆಹಾರ ಇಷ್ಟಪಡುವುದಿಲ್ಲ. ಇದಕ್ಕೆ ಕಾರಣವಿಷ್ಟೇ ಪ್ಯಾಕೆಟ್ ಫುಡ್ ಗಳಲ್ಲಿ ಅತಿಯಾದ ಸಿಹಿ ಬಳಸಿರುತ್ತಾರೆ. ಮತ್ತು ಈ ಸಿಹಿ ಆರೋಗ್ಯಕ್ಕೆ ಒಳ್ಳೆಯದಲ್ಲ.

ಮಕ್ಕಳಲ್ಲಿ ಕಾಡುವ ಅತಿಸಾರ ಸಮಸ್ಯೆ ನಿವಾರಣೆಗೆ ಇದನ್ನು ತಿನ್ನಿಸಿ

ಮಳಿಗೆಗಳಿಂದ ಆನ್ ಲೈನ್ ನಿಂದ ನೇರವಾಗಿ ಖರೀದಿಸುವ ಬದಲು ನಿಮ್ಮ ವೈದ್ಯರ ಅಭಿಪ್ರಾಯ ಪಡೆಯಿರಿ. ರಾಸಾಯನಿಕ ಮುಕ್ತ, ಸಾವಯವ ಎಂಬ ಸ್ಟಿಕ್ಕರ್ ಅಂಟಿಸಿಕೊಂಡ ಉತ್ಪನ್ನಗಳ ತಯಾರಿಗೆ ಬಳಸಲಾದ ಸಾಮಗ್ರಿಗಳ ಕಡೆಗೂ ಗಮನ ಹರಿಸಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...