Kannada Duniya

ಮಕ್ಕಳು ನಿಮ್ಮ ಮಾತನ್ನು ಕೇಳಬೇಕೆ…? ಹಾಗಾದ್ರೆ ಈ ಟಿಪ್ಸ್ ಟ್ರೈ ಮಾಡಿ ನೋಡಿ

ಮಕ್ಕಳು ನಿಯಂತ್ರಣಕ್ಕೆ ಸಿಗುವುದಿಲ್ಲ, ಹೇಳಿದ ಮಾತು ಕೇಳುವುದಿಲ್ಲ ಎಂದು ದೂರುವ ಸಾಕಷ್ಟು ಮಂದಿ ಪೋಷಕರನ್ನು ನೀವು ನೋಡಿರಬಹುದು.ಮಕ್ಕಳನ್ನು ದೂರುವ ಬದಲು ಅವರನ್ನು ಹೀಗೆ ಬೆಳೆಸುವ ಮೂಲಕ ನಿಮ್ಮ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು. ಅದು ಹೇಗೆಂದಿರಾ.‌.? ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ.
ಯಾವುದೇ ಕೆಲಸ ಇಲ್ಲದ ಮಕ್ಕಳು ತರಲೆ ಕೆಲಸಗಳಲ್ಲಿ ತೊಡಗಿ ಕೊಳ್ಳುತ್ತಾರೆ. ಅವರೇ ತುಂಟಾಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕೆಲವಷ್ಟು ಜವಾಬ್ದಾರಿಗಳನ್ನು ಅವರಿಗೆ ನೀಡಿ. ಇದು ಅವರ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವಂತಿರಲಿ. ಹಾಗೂ ಶಾಲೆಯಲ್ಲಿಯೂ ಕೌಶಲ ವೃದ್ಧಿಗೆ ನೆರವಾಗಲಿ.
ಸಣ್ಣ ಪುಟ್ಟ ಕೆಲಸಗಳು ಅಂದರೆ ಕುಡಿದ ಗ್ಲಾಸ್ ಅನ್ನು ಸಿಂಕ್ ಬಳಿ ಇಟ್ಟು ಬರುವುದು, ಕೆಳಗೆ ಬಿದ್ದ ಸ್ಪೂಅನ್ನು ಎತ್ತಿ ತೆಗೆದಿರಿಸುವುದು ಮೊದಲಾದ ಸಣ್ಣ ಪುಟ್ಟ ಕೆಲಸ ಮಾಡಿಸಿ. ಬಳಿಕ ಅವರಿಗೆ ಧನ್ಯವಾದಗಳನ್ನು ತಿಳಿಸಿ. ಇದರಿಂದ ಮಕ್ಕಳಿಗೆ ಮತ್ತಷ್ಟು ಕೆಲಸ ಮಾಡಲು ಹುಮ್ಮಸ್ಸು ದೊರೆಯುತ್ತದೆ.
ಮಕ್ಕಳಿಗೆ ಅವರ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ. ಕಣ್ಣೀರನ್ನು ನಿಗ್ರಹಿಸುವ ಅಥವಾ ಕೋಪವನ್ನು ನುಂಗುವ ಸಂದರ್ಭಗಳಿಗೆ ಉತ್ತೇಜನ ನೀಡದಿರಿ. ನೋವು ಅಥವಾ ದುಃಖವನ್ನು ಹೊರ ಹಾಕುವುದರಿಂದ ಮನಸ್ಸು ಹೂವಿನಷ್ಟು ಹಗುರವಾಗುತ್ತದೆ.
ಮಕ್ಕಳು ಹೆತ್ತವರ ಪ್ರೀತಿಯ ಅಪ್ಪುಗೆಗೆ, ಸಿಹಿಯಾದ ಮುತ್ತಿಗೆ ಹಾತೊರೆಯುತ್ತಾರೆ. ಯಾವುದೇ ಕಾರಣಕ್ಕೂ ಮಗುವಿಗೆ ದೈಹಿಕ ಪ್ರೀತಿಯನ್ನು ಕಡಿಮೆ ಮಾಡದಿರಿ.

Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...