Kannada Duniya

ಮಕ್ಕಳಿಗೆ ಬಾಲ್ಯದಿಂದಲೇ ಗಣಿತ ಹೇಳಿಕೊಡಿ!

ಮಕ್ಕಳಿಗೆ ಗಣಿತವನ್ನು ಹೇಳಿಕೊಡುವುದು ಕಷ್ಟವಲ್ಲ. ಅವರಿಗೆ ಬಣ್ಣವೆಂದರೆ ಬಹಳ ಇಷ್ಟವಿರುತ್ತದೆ. ಹಾಗಾಗಿ ಬಣ್ಣಗಳಿಂದಲೇ ಅವರಿಗೆ ಸಂಖ್ಯೆಗಳನ್ನು ಹೇಳಿಕೊಡಲು ಆರಂಭಿಸಿ. ಗಣಿತ ಕಲಿಸುವಾಗ ಹಣ್ಣು ತರಕಾರಿಗಳನ್ನು ಬಳಸಿಕೊಳ್ಳಿ.

ಮಾರುಕಟ್ಟೆಯಲ್ಲಿ ಸಿಗುವ ಹಲವು ವಿಧದ ಆಟಿಕೆಗಳ ಪೈಕಿ ಮೊದಲಿಗೆ ಶೇಪ್ ಅನ್ನು ಕಲಿಸಿಕೊಡಿ. ನಿಮ್ಮ ಸುತ್ತ ಸಿಗುವ ಆಕಾರಗಳನ್ನು ತೋರಿಸಿ ಹಾಗೂ ಗುರುತಿಸಲು ಹೇಳಿ.

ಬಣ್ಣದ ಚೆಂಡುಗಳನ್ನು ಎಣಿಸಲು, ಪ್ರತ್ಯೇಕಿಸಲು ಕಲಿಸಿ. ಬಾಯಿಗೆ ಹಾಕಿಕೊಳ್ಳಲು ಸಾಧ್ಯವಿಲ್ಲದಂತಹ ಚಿಪ್ಪುಗಳನ್ನು ಅವರಿಗೆ ಆಡಲು ಕೊಡಿ. ಯಾವುದೇ ಆಟಿಕೆ ಇಲ್ಲವಾದರೂ ಕೈ ಚಪ್ಪಾಳೆ ತಟ್ಟುವ ಮೂಲಕ ಎಣಿಸುವ ಆಟ ಆರಂಭಿಸಿ.

ಬಣ್ಣಗಳನ್ನು ವಿಂಗಡಿಸುವ ಆಟವೂ ಅತ್ಯುತ್ತಮವಾದುದು. ಅಡುಗೆ ಮನೆಯಲ್ಲಿ ಹಾಳಾಗದ ಅಂದರೆ ನೀರುಳ್ಳಿ ಬಟಾಟೆಯನ್ನು ಪ್ರತ್ಯೇಕಿಸಲು ಮಕ್ಕಳಿಗೆ ಕೊಡಿ. ತಟ್ಟೆ ಹಾಕಿದ ಪುಟಾಣಿ ದೋಸೆಗಳನ್ನು ಎಣಿಸಲು ಹೇಳಿ.

ಸರಳ ಸುಲಭ ವಿಧಾನಗಳ ಮೂಲಕವೇ ಮಕ್ಕಳಿಗೆ ಗಣಿತ ಕಲಿಸಿ. ಕ್ರಮೇಣ ವ್ಯವಕಲನ, ಗುಣಾಕಾರ, ಭಾಗಾಕಾರಗಳನ್ನೂ ತಿಳಿಸಿಕೊಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...