Kannada Duniya

ಯಾವ ವಯಸ್ಸಿನಲ್ಲಿ ಕಾಸ್ಮೆಟಿಕ್ ಅನ್ನು ಬಳಸಿದರೆ ಒಳ್ಳೆಯದು

ಕೆಲವು ಪೋಷಕರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಾಸ್ಮೆಟಿಕ್ ಅನ್ನು ಬಳಸಲು ಶುರುಮಾಡುತ್ತಾರೆ. ಆದರೆ ಅವರ ಚರ್ಮ ಸೂಕ್ಷ್ಮ ವಾಗಿರುವ ಕಾರಣ ಇದರಿಂದ ಅವರ ಚರ್ಮಕ್ಕೆ ಹಾನಿಯಾಗಬಹುದು. ಹಾಗಾಗಿ ಮಕ್ಕಳ ಚರ್ಮಕ್ಕೆ ಕಾಸ್ಮೆಟಿಕ್ ಯಾವಾಗ ಬಳಸಬೇಕು ಎಂಬುದನ್ನು ತಿಳಿಯಿರಿ.

ಅನೇಕ ಕಾಸ್ಮೆಟಿಕ್ ಗಳಲ್ಲಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಮತ್ತು ಇವುಗಳಲ್ಲಿ ಸುಗಂಧ ಮತ್ತು ಬಣ್ಣಗಳನ್ನು ಬಳಸಲಾಗುತ್ತದೆ. ಲಿಪ್ ಗ್ಲಾಸ್ ನಲ್ಲಿ ಸೀಸವನ್ನು ಬಳಸಲಾಗುತ್ತದೆ. ಟಾಲ್ಕಂ ಪೌಡರ್ ಮತ್ತು ಫೇಂಡೇಶನ್ ಅನ್ನು ಮಕ್ಕಳ ಚರ್ಮಕ್ಕೆ ಹಚ್ಚಬಾರದು. ಇದರಿಂದ ಚರ್ಮ ಒಣಗುತ್ತದೆ. ಎಸ್ಟಿಮಾ ಸಮಸ್ಯೆ ಕಾಡುತ್ತದೆ.

ಹಾಗಾಗಿ ನಿಮ್ಮ ಮಕ್ಕಳ ಚರ್ಮಕ್ಕೆ ಕಾಸ್ಮೆಟಿಕ್ ಅನ್ನು ಬಳಸುವ ಮುನ್ನ ಅವರ ಚರ್ಮದ ಪ್ರಕಾರಗಳನ್ನು ತಿಳಿದುಕೊಂಡು ಬಳಸಿ. ಅದಕ್ಕಾಗಿ ಚರ್ಮ ರೋಗ ತಜ್ಞರ ಸಹಾಯ ಪಡೆಯಿರಿ. ಅವರು ತಿಳಿಸಿದಂತೆ ಕ್ರೀಂ, ಪೌಡರ್ ಅನ್ನು ಬಳಸಿ. ಇದರಿಂದ ಯಾವುದೇ ಚರ್ಮದ ಸಮಸ್ಯೆಗಳು ಕಾಡುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...