Kannada Duniya

ಮೆಣಸಿನ ಕಾಯಿ ಕತ್ತರಿಸಿದ ಬಳಿಕ ಕೈಗಳು ಉರಿಯುತ್ತಿದ್ದರೆ ಈ ಸಲಹೆ ಪಾಲಿಸಿ

ಅಡುಗೆಯಲ್ಲಿ ಮೆಣಸಿನಕಾಯಿಯನ್ನು ಬಳಸುತ್ತೇವೆ. ಮೆಣಸಿನ ಕಾಯಿ ತುಂಬಾ ಖಾರವಾಗಿರುವುದರಿಂದ ಇದನ್ನು ಕತ್ತರಿಸಿದ ಬಳಿಕ ಕೈಗಳು ಉರಿಯುತ್ತದೆ. ಹಾಗಾಗಿ ಈ ಉರಿಯನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ.

ಮೆಣಸಿನ ಕಾಯಿಯಲ್ಲಿ ಕ್ಯಾಪ್ಸೈಸಿನ್ ಅಂಶ ಕಂಡುಬರುತ್ತದೆ. ಇದು ಚರ್ಮದ ಸಂಪರ್ಕಕ್ಕೆ ಬಂದಾಗ ಸುಡುವ ವೇದನೆ ಕಾಡುತ್ತದೆ. ಹಾಗಾಗಿ ನಿಮ್ಮ ಕೈಗಳು ಇದರಿಂದ ಉರಿಯುತ್ತಿದ್ದರೆ ಕೈಗಳಿಗೆ ಐಸ್ ನಿಂದ ಮಸಾಜ್ ಮಾಡಿ. ಇದರಿಂದ ಉರಿ ಕಡಿಮೆಯಾಗುತ್ತದೆ.

ಮೆಣಸಿನ ಕಾಯಿ ಕತ್ತರಿಸಿ ಕೈಗಳು ಉರಿಯುತ್ತಿದ್ದರೆ ಕೈಗಳಿಗೆ ಅಲೊವೆರಾ ಜೆಲ್ ಅನ್ನು ಹಚ್ಚಿ. ಇದು ತಂಪಾಗಿಸುವ ಗುಣವನ್ನು ಹೊಂದಿರುವ ಕಾರಣ ಇದು ಚರ್ಮದ ಉರಿಯನ್ನು ಕಡಿಮೆ ಮಾಡುತ್ತದೆ.

ನಿಂಬೆ ಕೈಗಳ ಉರಿಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲವಿದೆ. ಹಾಗಾಗಿ ಇದನ್ನು ಚರ್ಮಕ್ಕೆ ಹಚ್ಚಿದರೆ ಉರಿ ನಿವಾರಣೆಯಾಗುತ್ತದೆ.

ಹಾಗೇ ಮೆಣಸಿನ ಕಾಯಿಯನ್ನು ಕತ್ತರಿಸಿದ ಬಳಿಕ ಕೈಗಳಲ್ಲಿ ಸುಡುವ ವೇದನೆ ಇದ್ದರೆ ಕೈಗಳಿಂದ ಹಿಟ್ಟನ್ನು ಬೆರೆಸಿ ಇದರಿಂದ ಉರಿ ಕಡಿಮೆಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...