Kannada Duniya

ಕೆಂಪು ಮತ್ತು ಹಸಿರು ಮೆಣಸಿನಕಾಯಿಯಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದಲ್ಲ?

ಪ್ರತಿಯೊಬ್ಬರು ಮಸಾಲೆಯುಕ್ತ ಆಹಾರವನ್ನು ಸೇವಿಸಲು ಬಯಸುತ್ತಾರೆ. ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಮೆಣಸಿನ ಕಾಯಿ ಆರೋಗ್ಯಕ್ಕೆ ಉತ್ತಮವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಕೆಂಪು ಮತ್ತು ಹಸಿರು ಮೆಣಸಿನ ಕಾಯಿ ದೊರೆಯುತ್ತದೆ. ಇದರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು? ಯಾವುದು ಕೆಟ್ಟದು ಎಂಬುದನ್ನು ತಿಳಿಯಿರಿ.

ಕೆಂಪು ಮೆಣಸಿನ ಕಾಯಿಯ ಅತಿಯಾದ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಇದರಿಂದ ಹೊಟ್ಟೆಯಲ್ಲಿ ಉರಿ, ಆ್ಯಸಿಡಿಟಿ ಮತ್ತು ಅಜೀರ್ಣದಂತಹ ಸಮಸ್ಯೆ ಕಾಡಬಹುದು. ಹಾಗಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಇದನ್ನು ಸೇವಿಸಬಾರದು. ಅಲ್ಲದೇ ಕೆಂಪು ಮೆಣಸಿನ ಕಾಯಿಯನ್ನು ಹೆಚ್ಚು ಸೇವಿಸಿದರೆ ತಲೆನೋವಿನ ಸಮಸ್ಯೆ ಕಾಡುತ್ತದೆಯಂತೆ. ಮತ್ತು ಇದರಿಂದ ಅತಿಸಾರ ಮತ್ತು ವಾಂತಿಯ ಸಮಸ್ಯೆ ಕಾಡುತ್ತದೆಯಂತೆ.

ಆದರೆ ಹಸಿರು ಮೆಣಸಿನ ಕಾಯಿ ಕೆಂಪು ಮೆಣಸಿನ ಕಾಯಿಗಿಂತ ಹೆಚ್ಚು ಸುರಕ್ಷಿತವಾಗಿದೆ. ಇದರಲ್ಲಿ ಕಡಿಮೆ ಕ್ಯಾಪ್ಸೈಸಿನ್ ಅಂಶವಿದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು. ಅದರಲ್ಲೂ ಬಿಳಿ ಮೆಣಸಿನ ಕಾಯಿಯಲ್ಲಿ ಕ್ಯಾಪ್ಸೈಸಿನ್ ಅಂಶ ತುಂಬಾ ಕಡಿಮೆ ಇರುವ ಕಾರಣ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...