Kannada Duniya

ತೋಳುಗಳ ಕೊಬ್ಬನ್ನು ಕರಗಿಸಲು ಈ ಯೋಗಾಸನವನ್ನು ಅಭ್ಯಾಸ ಮಾಡಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬೊಜ್ಜಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಕೆಲವರಿಗೆ ಹೊಟ್ಟೆ, ಸೊಂಟ, ಕೈ, ತೊಡೆ ಮುಂತಾದ ಕಡೆ ಕೊಬ್ಬು ಸಂಗ್ರಹವಾಗುತ್ತದೆ. ಇದು ನಿಮ್ಮ ದೇಹದ ಆಕಾರವನ್ನು ಕೆಡಿಸುತ್ತದೆ. ಹಾಗಾಗಿ ನಿಮ್ಮ ತೋಳಿನ ಕೊಬ್ಬನ್ನು ಕರಗಿಸಲು ಈ ಆಸನವನ್ನು ಅಭ್ಯಾಸ ಮಾಡಿ.

ಭುಜಂಗಾಸನ : ನಿಮ್ಮ ಹೊಟ್ಟೆಯ ಮೇಲೆ ಮಲಗಿ ನಿಮ್ಮ ಅಂಗೈಯನ್ನು ಭುಜದ ನೇರಕ್ಕೆ ಕೆಳಗೆ ಇರಿಸಿ ಕೈಗಳ ಮೇಲೆ ಒತ್ತಡ ಹೇರಿ ದೇಹವನ್ನು ಮೇಲಕ್ಕೆತ್ತಿ. ತಲೆಯನ್ನು ಹಿಂದಕ್ಕೆ ಭಾಗಿಸಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಇಡಿ.

ಚತುರಂಗ ದಂಡಾಸನ:ಮೊದಲು ಯೋಗ ಚಾಪೆಯ ಮೇಲೆ ನಿಮ್ಮ ಹೊಟ್ಟೆಯ ಮೇಲೆ ಮಲಗಿ ನಿಮ್ಮ ಕೈಗಳನ್ನು ನಿಮ್ಮ ಎದೆಯ ಬಳಿ ತಂದು ನೆಲದ ಮೇಲೆ ವಿಶ್ರಾಂತಿ ಮಾಡಿ. ಈ ವೇಳೆ ನಿಮ್ಮ ದೇಹದ ಸಂಪೂರ್ಣ ತೂಕವನ್ನು ನಿಮ್ಮ ಕೈಗಳ ಮೇಲೆ ಇರಿಸಿ ಮತ್ತು ಕಾಲ್ಬೆರಳುಗಳ ಮೇಲೆ ಬಲವನ್ನು ಹಾಕಿ ನಿಮ್ಮ ಇಡೀ ದೇಹವನ್ನು ಮೇಲಕ್ಕೆತ್ತಿ . ನಿಮ್ಮ ತಲೆ, ಬೆನ್ನು ಮತ್ತು ಕಾಲನ್ನು ನೇರವಾಗಿಸಿ. 2 ನಿಮಿಷಗಳ ಕಾಲ ಈ ಭಂಗಿಯಲ್ಲೇ ಇರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...