Kannada Duniya

ರವಾ ಮತ್ತು ಬೇಳೆ ಹಿಟ್ಟು ಇದರಲ್ಲಿ ಯಾವುದು ತೂಕ ಇಳಿಕೆಗೆ ಸಹಕಾರಿ….?

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ತಮ್ಮ ತೂಕವನ್ನು ಇಳಿಸಿಕೊಳ್ಳಲು ಹಲವಾರು ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೇಳೆಹಿಟ್ಟು ಮತ್ತು ರವಾವನ್ನು ತೂಕ ನಷ್ಟಕ್ಕೆ ಬಳಸುತ್ತಾರೆ. ಆದರೆ ಇವೆರಡರಲ್ಲೂ ಯಾವುದು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ತಿಳಿಯಿರಿ.

ಕಡಲೆಯಿಂದ ತಯಾರಿಸಿದ ಹಿಟ್ಟು ಬೇಳೆ ಹಿಟ್ಟು. ಇದು ಅಂಟು ಮುಕ್ತವಾಗಿದೆ. ಇದು ಕೊಬ್ಬು ಮತ್ತು ಕ್ಯಾಲೋರಿಯನ್ನು ಹೆಚ್ಚು ಹೊಂದಿದೆ. ಮತ್ತು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ.

ಹಾಗೇ ರವಾವನ್ನು ಗೋಧಿಯಿಂದ ತಯಾರಿಸಲಾಗುತ್ತದೆ. ಇದು ಹೆಚ್ಚು ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್ ಗಳನ್ನು ಹೊಂದಿದೆ. ಜೊತೆಗೆ ಫೈಬರ್ ಮತ್ತು ಕಬ್ಬಿಣಾಂಶವಿದೆ. ಮತ್ತು ಇದು ಕಡಿಮೆ ಕೊಬ್ಬಿನಾಂಶವನ್ನು ಹೊಂದಿದೆ. ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ.

Pepper for weightloss: ತೂಕ ಇಳಿಸಲು ಕರಿಮೆಣಸನ್ನು ಈ ರೀತಿಯಲ್ಲಿ ಬೆರೆಸಿ ಸೇವಿಸಿ…!

ಹಾಗಾಗಿ ಕಡಲೆ ಹಿಟ್ಟು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದು ಮಧುಮೇಹಿಗಳ ತೂಕ ನಷ್ಟಕ್ಕೆ ಉತ್ತಮ ಆಯ್ಕೆಯಾಗಿದೆ. ಹಾಗೇ ಅಂಟು ಅಲರ್ಜಿ(gluten) ಇರುವವರು ರವಾವನ್ನು ಸೇವಿಸಬೇಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...