Kannada Duniya

ಮಧುಮೇಹಿಗಳು ಮಾತ್ರವಲ್ಲದೇ ಈ ಸಮಸ್ಯೆ ಇರುವವರು ಬೆಲ್ಲವನ್ನು ಸೇವಿಸಬಾರದಂತೆ!

ಬೆಲ್ಲವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನೀಶಿಯಂ, ಸೋಡಿಯಂ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿದೆ. ಹಾಗಾಗಿ ಇದು ದೇಹಕ್ಕೆ ಒಳ್ಳೆಯದು. ಆದರೆ ಈ ಸಮಸ್ಯೆ ಇರುವವರು ಬೆಲ್ಲವನ್ನು ಸೇವಿಸಬಾರದಂತೆ.

ತೂಕ ಇಳಿಸಿಕೊಳ್ಳಲು ಬಯಸುವವರು ಬೆಲ್ಲವನ್ನು ಸೇವಿಸಬಾರದಂತೆ. ಇದರಲ್ಲಿ ಕ್ಯಾಲೋರಿ ಪ್ರಮಾಣ ಹೆಚ್ಚಾಗಿರುತ್ತದೆಯಂತೆ. ಇದರಿಂದ ತೂಕ ಕೂಡ ಹೆಚ್ಚಾಗುತ್ತದೆಯಂತೆ.

ಸಂಧಿವಾತ ಸಮಸ್ಯೆ ಇರುವವರು ಬೆಲ್ಲವನ್ನು ಸೇವಿಸಬಾರದಂತೆ. ಇದು ಉರಿಯೂತವನ್ನು ಹೆಚ್ಚಿಸುವ ಗುಣವನ್ನು ಹೊಂದಿದ್ದು, ಇದು ನೋವನ್ನು ಮತ್ತಷ್ಟು ಹೆಚ್ಚಿಸುತ್ತದೆಯಂತೆ.

ಮಲಬದ್ಧತೆ ಸಮಸ್ಯೆ ಇರುವವರು ಬೆಲ್ಲವನ್ನು ಸೇವಿಸಬಾರದಂತೆ. ಇದು ಉಷ್ಣತೆಯ ಗುಣವನ್ನು ಹೊಂದಿದೆ. ಇದು ಜೀರ್ಣಕ್ರಿಯೆಯ ಸಮಸ್ಯೆಯನ್ನು ಉಂಟುಮಾಡುತ್ತದೆಯಂತೆ.

ಮೂಗಿನಲ್ಲಿ ರಕ್ತಸ್ರಾವವಾಗುವ ಸಮಸ್ಯೆ ಇರುವವರು ಬೆಲ್ಲವನ್ನು ತಿನ್ನಬಾರದಂತೆ. ಇದು ರಕ್ತಸ್ರಾವದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...