Kannada Duniya

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅಶ್ವಗಂಧ ಪ್ರಯೋಜನಕಾರಿಯೇ?

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ನಮ್ಮ ಕೆಟ್ಟ ಆಹಾರ ಪದ್ಧತಿಯೇ ಕಾರಣ. ಹಾಗಾಗಿ ಜನರು ತೂಕವನ್ನು ಇಳಿಸಿಕೊಳ್ಳಲು ಹಲವಾರು ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಹಾಗಾದ್ರೆ ಹೊಟ್ಟೆಯ ಕೊಬ್ಬನ್ನು ಕರಗಿಸಲು ಅಶ್ವಗಂಧವನ್ನು ಹೀಗೆ ಬಳಸಿ.

ನೀವು ತೂಕ ಇಳಿಸಿಕೊಳ್ಳಲು ಬಯಸಿದ್ದರೆ ಅಶ್ವಗಂಧವನ್ನು ಬಳಸಿ. ಇದು ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕರಗಿಸುತ್ತದೆ. ಇದು ತೂಕ ಇಳಿಸುವುದು ಮಾತ್ರವಲ್ಲ ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಮತ್ತು ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

ಹಾಗಾಗಿ ಒಂದು ಲೋಟ ನೀರಿಗೆ 1-2 ಅಶ್ವಗಂಧದ ಬೇರುಗಳನ್ನು ಅಥವಾ ಅಶ್ವಗಂಧದ ಪುಡಿಯನ್ನು ಸೇರಿಸಿ. ನಂತರ ಅದಕ್ಕೆ ಸ್ವಲ್ಪ ಶುಂಠಿ ಮತ್ತು 4-5 ತುಳಸಿ ಎಲೆಗಳನ್ನು ಮಿಕ್ಸ್ ಮಾಡಿ 10 ನಿಮಿಷಗಳ ಕಾಲ ಕುದಿಸಿ ಫಿಲ್ಟರ್ ಮಾಡಿ ಅದಕ್ಕೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ದಿನಕ್ಕೆ 2 ಬಾರಿ ಕುಡಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...