Kannada Duniya

Pepper for weightloss: ತೂಕ ಇಳಿಸಲು ಕರಿಮೆಣಸನ್ನು ಈ ರೀತಿಯಲ್ಲಿ ಬೆರೆಸಿ ಸೇವಿಸಿ…!

ಕರಿಮೆಣಸು ಯಾವುದೇ ಪದಾರ್ಥದ ರುಚಿಯನ್ನು ಹೆಚ್ಚಿಸುತ್ತದೆ. ಕರಿಮೆಣಸಿನಲ್ಲಿ ಪೈಪರಿನ್ ಎಂಬ ಅಂಶವಿದೆ. ಇದು ಔಷಧೀಯ ಗುಣಗಳಿಂದ ಕೂಡಿದೆ. ಕಬ್ಬಿಣ, ಪೊಟ್ಯಾಶಿಯಂ, ಮೆಗ್ನಿಶಿಯಂ, ಮ್ಯಾಂಗನೀಸ್, ಸತು, ವಿಟಮಿನ್ ಎ ಮುಂತಾದ ಪೋಷಕಾಂಶಗಳು ಕಂಡುಬರುತ್ತದೆ. ಇದು ಹಲವಾರು ಪ್ರಯೋಜನವನ್ನು ಹೊಂದಿದೆ.

ಕರಿಮೆಣಸು ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಕರಿಮೆಣಸಿನ ಪುಡಿಯನ್ನು ಬಿಸಿ ಹಾಲಿನಲ್ಲಿ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ಕೊಬ್ಬು ಕರಗುತ್ತದೆ. ಹಾಗೇ ತೂಕ ನಿಯಂತ್ರಣದಲ್ಲಿರುತ್ತದೆ. ಹಾಗೇ ಇದು ದೇಹದಲ್ಲಿ ನಿರ್ಜಲೀಕರಣ ಸಮಸ್ಯೆಯನ್ನು ದೂರಮಾಡುತ್ತದೆ. ಚರ್ಮ ಒಣಗುವುದನ್ನು ನಿವಾರಿಸುತ್ತದೆ.

Weightloss salad: ತೂಕವನ್ನು ಇಳಿಸಿಕೊಳ್ಳಲು ರಾತ್ರಿಯ ಊಟದಲ್ಲಿ ಈ ಸಲಾಡ್ ಅನ್ನು ಸೇವಿಸಿ…!

ಹಾಗೇ ಕರಿಮೆಣಸನ್ನು ನಿಂಬೆ ರಸ ಮತ್ತು ಉಪ್ಪಿನ ಜೊತೆ ಒಂದು ಗ್ಲಾಸ್ ನೀರಿನಲ್ಲಿ ಬೆರೆಸಿ ಕುಡಿದರೆ ಗ್ಯಾಸ್ ಮತ್ತು ಮಲಬದ್ಧತೆ ಸಮಸ್ಯೆ ಕೆಲವೇ ದಿನಗಳಲ್ಲಿ ಗುಣವಾಗುತ್ತದೆ. ಹಾಗೇ ಕರಿಮೆಣಸನ್ನು ಉಗುರುಬೆಚ್ಚಗಿರುವ ನೀರಿನಲ್ಲಿ ಬೆರೆಸಿ ಕುಡಿಯಿರಿ. ಇದರಿಂದ ದೈಹಿಕ ಸಾಮರ್ಥ್ಯವು ಹೆಚ್ಚಾಗುತ್ತದೆ. ಇದು ದೇಹದ ಆಯಾಸವನ್ನು ತೆಗೆದುಹಾಕುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...