Kannada Duniya

ರುಚಿಯಾದ ‘ಕರ್ಜಿಕಾಯಿ’ ಮಾಡುವ ವಿಧಾನ…!

ಹಬ್ಬಕ್ಕೆ ಏನಾದರೂ ಸಿಹಿ ಮಾಡಬೇಕು ಎಂದುಕೊಂಡಿದ್ದೀರಾ…? ಹಾಗಾದ್ರೆ ಇಲ್ಲಿದೆ ನೋಡಿ ರುಚಿಯಾದ ಕರ್ಜಿಕಾಯಿ ಮಾಡುವ ವಿಧಾನ. ಮಕ್ಕಳೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ.

ಬೇಕಾಗುವ ಸಾಮಗ್ರಿಗಳು: 1 ಕಪ್-ಮೈದಾ, ¼ ಕಪ್-ರವೆ, 3 ಟೇಬಲ್ ಸ್ಪೂನ್-ಅಕ್ಕಿ ಹಿಟ್ಟು, 2 ಟೇಬಲ್ ಸ್ಪೂನ್- ತುಪ್ಪ, ನೀರು-ಸ್ವಲ್ಪ, ಎಣ್ಣೆ-ಕರಿಯಲು, ½ ಕಪ್-ಬೆಲ್ಲ, ¼ ಕಪ್- ತೆಂಗಿನಕಾಯಿ ತುರಿ, ½ ಕಪ್-ಪುಟಾಣಿ, ½ ಟೀ ಸ್ಪೂನ್-ಏಲಕ್ಕಿ ಪುಡಿ.

ಮಾಡುವ ವಿಧಾನ: ಒಂದು ಅಗಲವಾದ ಪಾತ್ರೆಗೆ ಮೈದಾ ಹಿಟ್ಟು, ರವೆ, ಅಕ್ಕಿಹಿಟ್ಟು ಹಾಕಿ ಅದಕ್ಕೆ ತುಪ್ಪವನ್ನು ಬಿಸಿ ಮಾಡಿಕೊಂಡು ಹಾಕಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿಕೊಂಡು ಹಿಟ್ಟನ್ನು ನಾದಿಕೊಳ್ಳಿ. ಒಂದು ಒದ್ದೆ ಬಟ್ಟೆಯನ್ನು ಹಿಟ್ಟಿನ ಮೇಲೆ ಹಾಕಿ ಮುಚ್ಚಿಡಿ. ನಂತರ ಮಿಕ್ಸಿ ಜಾರಿಗೆ ಹುರಿದ ಪುಟಾಣಿ, ತೆಂಗಿನಕಾಯಿತುರಿ ಹಾಕಿ ತರಿತರಿಯಾಗಿ ರುಬ್ಬಿಕೊಂಡು ಅದಕ್ಕೆ ತುರಿದ ಬೆಲ್ಲ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

Mustard oil external uses:ಈ ಸ್ಥಳಗಳಲ್ಲಿ ‘ಸಾಸಿವೆ ಎಣ್ಣೆಯಿಂದ’ ಮಸಾಜ್ ಮಾಡಿದರೆ ಸಮಸ್ಯೆಗಳನ್ನು ನಿವಾರಿಸಬಹುದು…!

ನಾದಿಕೊಂಡ ಹಿಟ್ಟಿನಿಂದ ಸ್ವಲ್ಪ ಹಿಟ್ಟು ತೆಗೆದುಕೊಂಡು ಅದನ್ನು ಉಂಡೆಮಾಡಿಕೊಂಡು ಚಿಕ್ಕ ಚಪಾತಿ ರೀತಿ ಲಟ್ಟಿಸಿಕೊಳ್ಳಿ ಅದರ ಒಳಗೆ ಮಾಡಿಟ್ಟುಕೊಂಡ ಪುಟಾಣಿ ಬೆಲ್ಲದ ಹೂರಣ ಹಾಕಿ ಕರ್ಜಿಕಾಯಿ ಆಕಾರದಲ್ಲಿ ಮಡಚಿಕೊಳ್ಳಿ. ಬೇಕಿದ್ದರೆ ಕರ್ಜಿಕಾಯಿ ಮೌಲ್ಡ್ ಕೂಡ ಬಳಸಬಹುದು. ನಂತರ ಇದನ್ನು ಕಾದ ಎಣ್ಣೆಯಲ್ಲಿ ಎರಡೂ ಕಡೆ ಹೊಂಬಣ್ಣ ಬರುವವರೆಗೆ ಕರಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...