Kannada Duniya

ಆರೋಗ್ಯಕರವಾದ ಸಬ್ಬಸಿಗೆ ರೈಸ್ ಬಾತ್ ಮಾಡುವ ವಿಧಾನ

ರುಚಿಯಾದ ರೈಸ್ ಬಾತ್ ಇದ್ದರೆ ಸಾಂಬಾರು, ಪಲ್ಯದ ರಗಳೆ ಇರುವುದಿಲ್ಲ. ಇಲ್ಲಿ ಆರೋಗ್ಯಕರವಾದ ಸಬ್ಬಸಿಗೆ ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನ ಇದೆ. ತುಂಬಾನೇ ಸುಲಭವಾಗಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

1 ಕಪ್- ಅಕ್ಕಿ, 1 ಇಂಚು- ಚಕ್ಕೆ, 5-ಕಾಳುಮೆಣಸು, 2-ಪಲಾವ್ ಎಲೆ, 3-ಲವಂಗ, 2-ಹಸಿಮೆಣಸು,1 ಟೊಮ್ಯಾಟೋ, 1 ಟೇಬಲ್ ಸ್ಪೂನ್- ಶುಂಟಿ, ಬೆಳ್ಳುಳ್ಳಿ ಪೇಸ್ಟ್, 1 –ಈರುಳ್ಳಿ,  2 ಕಪ್- ಸಬ್ಬಸಿಗೆ ಸೊಪ್ಪು, 2 ಟೇಬಲ್ ಸ್ಪೂನ್ ತುಪ್ಪ, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ

ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ½ ಗಂಟೆಗಳ ಕಾಲ ನೆನೆ ಹಾಕಿ. ನಂತರ ಒಲೆಯ ಮೇಲೆ  ಒಂದು ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಕಿ ನಂತರ ಚಕ್ಕೆ, ಲವಂಗ, ಪಲಾವ್ ಎಲೆ, ಕಾಳುಮೆಣಸು ಸೇರಿಸಿ ತುಸು ಫ್ರೈ ಮಾಡಿ.ನಂತರ ಕತ್ತರಿಸಿದ ಈರುಳ್ಳಿ ಹಾಕಿ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಫ್ರೈ ಮಾಡಿ. ಈರುಳ್ಳಿ ಕೆಂಪಗಾದ ಬಳಿಕ ಕತ್ತರಿಸಿದ ಟೊಮ್ಯಾಟೋ, ಹಸಿಮೆಣಸು ಹಾಕಿ. ಟೊಮ್ಯಾಟೋ ಮೆತ್ತಗಾದ ಬಳಿಕ ಅಕ್ಕಿ ಸೇರಿಸಿ ತುಸು ಫ್ರೈ ಮಾಡಿ. ನಂತರ ಸೊಪ್ಪಸಿಗೆ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 2 ಕಪ್ ನೀರು ಸೇರಿಸಿ ಉಪ್ಪು ಬೆರೆಸಿ 2 ವಿಷಲ್ ಕೂಗಿಸಿಕೊಂಡರೆ ರುಚಿಯಾದ ಸಬ್ಬಸಿಗೆ ಸೊಪ್ಪಿನ ರೈಸ್ ಬಾತ್ ಸವಿಯಲು ರೆಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...