Kannada Duniya

ಉಪವಾಸ ಆರೋಗ್ಯಕರವಾಗಿರಲು ಈ ಸಲಹೆಯನ್ನು ಪಾಲಿಸಿ…!

ಕೆಲವರು ಹಬ್ಬ ಹರಿದಿನಗಳನ್ನು ಆಚರಿಸುವುದರ ಜೊತೆಗೆ ಉಪವಾಸ ವ್ರತಗಳನ್ನು ಮಾಡುತ್ತಾರೆ. ಆದರೆ ಉಪವಾಸ ಕೇವಲ ದೇವರಿಗೆ ಸಂಬಂಧಿಸಿದಲ್ಲ, ಅದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನವಿದೆ. ತೂಕ ನಿಯಂತ್ರಣ , ಉತ್ತಮ ಜೀರ್ಣಕ್ರಿಯೆಗೆ ಉಪವಾಸ ಸಹಕಾರಿಯಾಗಿದೆ. ಆದರೆ ಅದನ್ನು ಆರೋಗ್ಯಕರವಾಗಿರಲು ಈ ಸಲಹೆಗಳನ್ನು ಪಾಲಿಸಿ.

ಉಪವಾಸದ ಸಮಯದಲ್ಲಿ ದೇಹವನ್ನು ಯಾವಾಗಲೂ ಹೈಡ್ರೇಟ್ ಮಾಡಿ. ಸಾಕಷ್ಟು ನೀರನ್ನು ಕುಡಿಯಿರಿ. ದೇಹ ನಿರ್ಜಲೀಕರಣ ಸಮಸ್ಯೆಗೆ ಒಳಗಾದರೆ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಉಪವಾಸ ಮಾಡಿದಾಗ ಸರಿಯಾಗಿ ನೀರನ್ನು ಕುಡಿಯಿರಿ.

ಅನೇಕ ಜನರು ಉಪವಾಸದ ವೇಳೆ ದುರ್ಬಲತೆಯನ್ನು ಅನುಭವಿಸುತ್ತಾರೆ. ಹಾಗಾಗಿ ಉಪವಾಸದ ವೇಳೆ ಯಾವುದೇ ಕೆಲಸವನ್ನು ಮಾಡಬೇಡಿ. ವ್ಯಾಯಾಮ , ಕ್ರೀಡೆಗಳನ್ನು ತಪ್ಪಿಸಿ. ಇದರಿಂದ ದೇಹದ ಶಕ್ತಿ ಕಡಿಮೆಯಾಗುವುದಿಲ್ಲ.

ಉಪವಾಸದ ಸಮಯದಲ್ಲಿ ಹಣ್ಣುಗಳನ್ನು ಸೇವಿಸಿ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಹಾಗೇ ನಟ್ಸ್ ಗಳು, ದ್ರಾಕ್ಷಿ, ಸೇಬು ಮುಂತಾದ ಫೈಬರ್ , ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವ ಆಹಾರ ಸೇವಿಸಿ.

ಈ ಯೋಗ ಮಾಡುವುದರಿಂದ ಅಧಿಕ ಬಿಪಿ ಸಮಸ್ಯೆಯನ್ನು ನಿವಾರಿಸಬಹುದು….!

ಉಪವಾಸದ ಮೊದಲು ಮತ್ತು ನಂತರ ಆರೋಗ್ಯಕರವಾದ ಆಹಾರವನ್ನು ಸೇವಿಸಿ. ಜಂಕ್ ಫುಡ್, ಸಂಸ್ಕರಿಸಿದ ಆಹಾರಗಳನ್ನು ಸೇವಿಸಬೇಡಿ. ಇದರಿಂದ ದೇಹವು ಆರೋಗ್ಯಕರವಾಗಿರುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...