Kannada Duniya

Mustard oil external uses:ಈ ಸ್ಥಳಗಳಲ್ಲಿ ‘ಸಾಸಿವೆ ಎಣ್ಣೆಯಿಂದ’ ಮಸಾಜ್ ಮಾಡಿದರೆ ಸಮಸ್ಯೆಗಳನ್ನು ನಿವಾರಿಸಬಹುದು…!

ಸಾಸಿವೆ ಎಣ್ಣೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ದೇಹದ ಕೆಲವು ಭಾಗಗಳಿಗೆ ಮಸಾಜ್ ಮಾಡಬೇಕು. ಇದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದ್ರೆ ಸಾಸಿವೆ ಎಣ್ಣೆಯನ್ನು ದೇಹದ ಯಾವ ಭಾಗಗಳಿಗೆ ಬಳಸಿದರೆ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿಯಿರಿ.

-ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದನ್ನು ಮುಖಕ್ಕೆ ಹಚ್ಚಿದರೆ ಇದರಿಂದ ಚರ್ಮ ಮೃದುವಾಗುತ್ತದೆ. ಮುಖದಲ್ಲಿರುವ ಕಲೆಗಳು ನಿವಾರಣೆಯಾಗುತ್ತದೆ.

-ಸಾಸಿವೆ ಎಣ್ಣೆಯನ್ನು ಹಲ್ಲುಗಳಿಗೆ ಹಚ್ಚುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದು ಹಲ್ಲು ಮತ್ತು ಒಸಡುಗಳನ್ನು ಬಲಪಡಿಸುತ್ತದೆ. ಇದು ಹಳದಿ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ. ಹಾಗಾಗಿ ಕಲ್ಲುಪ್ಪು, ಅರಿಶಿನ, ಸಾಸಿವೆ ಎಣ್ಣೆ ಮಿಕ್ಸ್ ಮಾಡಿ ಹಲ್ಲುಗಳನ್ನು ಉಜ್ಜಿ.

-ಸಾಸಿವೆ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿದರೆ ತಲೆಹೊಟ್ಟು ನಿಯಂತ್ರಣಕ್ಕೆ ಬರುತ್ತದೆ ಮತ್ತು ಕೂದಲು ಬಲಗೊಳ್ಳುತ್ತದೆ. ಆದರೆ ಇದನ್ನು ಕೂದಲಿಗೆ ನೇರವಾಗಿ ಹಚ್ಚಬೇಡಿ ಹೇರ್ ಮಾಸ್ಕ್ ನಲ್ಲಿ ಬಳಸಿ ಹಚ್ಚಿ.

-ಗಾಯವಾದ ಯಾವುದೇ ಭಾಗದಲ್ಲಿ ನೋವು, ಊತ ಇದ್ದರೆ ಸಾಸಿವೆ ಎಣ್ಣೆಯನ್ನು ಆ ಸ್ಥಳಕ್ಕೆ ಹಚ್ಚಿ ಮಸಾಜ್ ಮಾಡಿದರೆ ನೋವು ಕಡಿಮೆಯಾಗುತ್ತದೆ. ಇದರಲ್ಲಿ ಉರಿಯೂತವನ್ನು ಕಡಿಮೆ ಮಾಡುವಂತಹ ಒಮೆಗಾ3 ಕೊಬ್ಬಿನಾಮ್ಲವಿದೆ.

ಬೆಳಿಗ್ಗೆ 1 ನಿಮಿಷಗಳ ಕಾಲ ಈ ಆಸನ ಮಾಡಿದರೆ ಹಲವಾರು ಸಮಸ್ಯೆಗಳು ದೂರವಾಗುತ್ತದೆ

-ಚರ್ಮದಲ್ಲಿ ಬಿರುಕು ಮೂಡಿದ್ದರೆ ಸಾಸಿವೆ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡಿದರೆ ಚರ್ಮ ತೇವಗೊಳ್ಳುತ್ತದೆ ಮತ್ತು ತುರಿಕೆ, ಬಿರುಕುಗಳು ನಿವಾರಣೆಯಾಗುತ್ತದೆ. ಆದರೆ ಸಾಸಿವೆ ಎಣ್ಣೆ ಹಚ್ಚಿ ಬಿಸಿಲಿಗೆ ಹೋಗಬೇಡಿ. ಯಾಕೆಂದರೆ ಬಿಸಿಲಿನಲ್ಲಿ ಇದು ಮೆಲನಿನ್ ಅಂಶವನ್ನು ಉತ್ಪಾದಿಸುತ್ತದೆ. ಇದರಿಂದ ಚರ್ಮ ಕಪ್ಪಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...