Kannada Duniya

Foods for Thyroid: ಥೈರಾಯ್ಡ್ ಸಮಸ್ಯೆಯಿದ್ದರೆ ಈ ಆಹಾರಗಳನ್ನು ಸೇವಿಸಿ…!

ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡಾಗ ಏನನ್ನು ತಿನ್ನಬೇಕು ಹಾಗೂ ಏನನ್ನು ತಿನ್ನಬಾರದು ಎಂಬ ಗೊಂದಲಕ್ಕೆ ಒಳಗಾಗುವುದು ಸಹಜ. ಈ ಸಮಯದಲ್ಲಿ ನೀವು ಸೇರಿಸಬೇಕಾದ ಸೂಪರ್ ಫುಡ್ ಗಳು ಯಾವುದೆಂದು ತಿಳಿಯೋಣ.

ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡರೆ ಅತಿಯಾಗಿ ದಪ್ಪಗಾಗುತ್ತೇವೆ ಅಥವಾ ತೂಕ ಕಳೆದುಕೊಳ್ಳುತ್ತೇವೆ ಎಂದು ತಪ್ಪು ಅಭಿಪ್ರಾಯವನ್ನು ಬಿಟ್ಟುಬಿಡಿ. ಉತ್ತಮ ಆರೋಗ್ಯ ಪದ್ಧತಿ ರೂಢಿಸಿಕೊಳ್ಳುವುದರಿಂದ ಥೈರಾಯ್ಡ್ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ಥೈರಾಯ್ಡ್ ಸಮಸ್ಯೆ ಇರುವವರು ನೆಲ್ಲಿಕಾಯಿ ಸೇವನೆಯನ್ನು ಕಡ್ಡಾಯಗೊಳಿಸಿ. ಇದರಲ್ಲಿ ಸಾಕಷ್ಟು ಪ್ರಮಾಣದ ರೋಗ ನಿರೋಧಕ ಶಕ್ತಿ ಇರುವ ಜೊತೆಗೆ ಇದು ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ತೆಂಗಿನಕಾಯಿ ಸೇವನೆಯು ಥೈರಾಯ್ಡ್ ಸಮಸ್ಯೆ ಇರುವವರಿಗೆ ಬಹಳ ಒಳ್ಳೆಯದು. ಇದು ಹಸಿಯೂ ಇರಬಹುದು ಬೇಯಿಸಿಯೂ ಇರಬಹುದು. ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ.

ಕುಂಬಳಕಾಯಿ ಬೀಜಗಳಲ್ಲಿ ಸತುವಿನ ಅಂಶ ಹೆಚ್ಚಿದ್ದು ಥೈರಾಯ್ಡ್ ಹಾರ್ಮೋನ್ ಗಳ ಸಮತೋಲನಕ್ಕೆ ಇದು ಅತ್ಯಗತ್ಯವಾಗಿದೆ. ಮೊಳಕೆ ಬರಿಸಿದ ಹೆಸರು ಕಾಳುಗಳಲ್ಲಿ ಹಲವು ಬಗೆಯ ಪೋಷಕಾಂಶಗಳಿದ್ದು ಮಲಬದ್ಧತೆ ಸೇರಿದಂತೆ ಹಲವು ಸಮಸ್ಯೆಯನ್ನು ದೂರ ಮಾಡಲು ನೆರವಾಗುತ್ತದೆ.

ಪಾಲಿಶ್ ಮಾಡಿದ ಅಥವಾ ಪಾಲಿಶ್ ಮಾಡದ ದ್ವಿದಳ ಧಾನ್ಯಗಳಲ್ಲಿ ಯಾವುದು ಉತ್ತಮ?

ಇನ್ನು ಥೈರಾಯ್ಡ್ ಸಮಸ್ಯೆ ಇರುವವರು ಸಂಸ್ಕರಿಸಿದ ಆಹಾರ ಮಸಾಲೆ ಪದಾರ್ಥಗಳು ಹಾಗೂ ಜಂಕ್ ಫುಡ್ ಗಳನ್ನು ಸೇವಿಸದಿರುವುದು ಒಳ್ಳೆಯದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...