Kannada Duniya

ವೆರೈಟಿ ಆಫ್ ಎಣ್ಣೆ: ಮನೆಯಲ್ಲೇ ಮಾಡಿ

ನಿಮ್ಮ ಲುಕ್ ಹಾಗೂ ವ್ಯಕ್ತಿತ್ವವನ್ನೇ ಹಾಳು ಮಾಡುವ ಕೂದಲು ಉದುರುವಿಕೆಯ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಕೆಲವು ಎಣ್ಣೆಗಳನ್ನು ಕೂದಲಿಗೆ ಬಳಸಿನೋಡಿ.

ಕೂದಲಿಗೆ ಸಾಕಷ್ಟು ಪೋಷಕಾಂಶಗಳನ್ನು ನೀಡುವುದು ಎಂದರೆ ಹೇರ್ ಆಯಿಲಿಂಗ್ ಮಾಡುವುದು.  ಮನೆಯಲ್ಲೇ ಮಾಡಬಹುದಾದ ಈ ಕೆಲವು ಆಯಿಲ್ ಗಳನ್ನು ಹೀಗೆ ತಯಾರಿಸಿ.

ಮೊದಲಿಗೆ ತೆಂಗಿನೆಣ್ಣೆಗೆ ತಾಜಾ ಅಲೋವೆರಾ ಜೆಲ್ ಸೇರಿಸಿ. ತುಸು ಬಿಸಿ ಮಾಡಿ. ಕರಗುತ್ತಲೇ ಕೆಳಗಿಳಿಸಿ. ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ. ವಾರಕ್ಕೆರಡು ಬಾರಿ ಈ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿ.

ಮೂರು ನೆಲ್ಲಿಕಾಯಿಯನ್ನು ಕತ್ತರಿಸಿ, ತುಂಡುಗಳನ್ನು ಬಿಸಿಲಿಗಿಟ್ಟು ಒಣಗಿಸಿ, ಪುಡಿ ಮಾಡಿಕೊಳ್ಳಿ. ಎರಡೆರಡು ಚಮಚ ತೆಂಗಿನೆಣ್ಣೆ ಹಾಗೂ ಎಳ್ಳೆಣ್ಣೆಯನ್ನು ಬಿಸಿ ಮಾಡಿ ಅದರೊಂದಿಗೆ ನೆಲ್ಲಿಕಾಯಿ ಪುಡಿ ಸೇರಿಸಿ. ಚೆನ್ನಾಗಿ ಬಿಸಿಯಾದ ಬಳಿಕ ಕೆಳಗಿಳಿಸಿ. ತಣ್ಣಗಾಗಲು ಬಿಡಿ.

ಬಳಿಕ ಫಿಲ್ಟರ್ ಮಾಡಿ ಬಾಟಲಿಯಲ್ಲಿ ಹಾಕಿಡಿ. ವಾರಕ್ಕೆ ಎರಡರಿಂದ ಮೂರು ಬಾರಿ ಕೂದಲಿಗೆ ಹಚ್ಚಿ. ಇದೇ ವಿಧಾನದಲ್ಲಿ ನೀರುಳ್ಳಿ ಎಣ್ಣೆಯನ್ನೂ ಮಾಡಿಕೊಂಡು ಕೂದಲಿಗೆ ಹಚ್ಚಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...