Kannada Duniya

ಕೂದಲು ವಾಶ್ ಮಾಡಿದ ಬಳಿಕ ಸಿಕ್ಕಾಗುವುದನ್ನು ತಡೆಯಲು ಈ ಸಲಹೆ ಪಾಲಿಸಿ

ಮಹಿಳೆಯರು ಕೂದಲನ್ನು ವಾಶ್ ಮಾಡಿದ ಬಳಿಕ ಕೂದಲು ಸಿಕ್ಕಾಗುತ್ತದೆ. ಇದನ್ನು ಬಾಚುವುದು ತುಂಬಾ ಕಷ್ಟ. ಇದರಿಂದ ಕೂದಲು ಉದುರುತ್ತದೆ ಮತ್ತು ತುಂಡಾಗುತ್ತದೆ. ಹಾಗಾಗಿ ಈ ಕೂದಲನ್ನು ನೇರಗೊಳಿಸಲು ಈ ಕ್ರಮ ಅನುಸರಿಸಿ.

ಕೂದಲನ್ನು ತೊಳೆದ ನಂತರ ಕೂದಲನ್ನು ಟವೆಲ್ ನಿಂದ ನಿಧಾನವಾಗಿ ಒರೆಸಿಕೊಳ್ಳಿ. ನಂತರ 15 ನಿಮಿಷಗಳ ಕಾಲ ಟವೆಲ್ ಅನ್ನು ಕೂದಲಿಗೆ ಕಟ್ಟಿಕೊಳ್ಳಿ. ಇದರಿಂದ ಕೂದಲು ಸಿಕ್ಕಾಗುವುದಿಲ್ಲ.

ಕೂದಲು ಒಣಗಿದ ನಂತರ ಕೂದಲನ್ನು ಬಾಚಿಕೊಳ್ಳಿ. ಇದು ಕೂದಲನ್ನು ನೇರವಾಗಿಸುತ್ತದೆ ಮತ್ತು ಸಿಕ್ಕಾಗುವುದನ್ನು ತಡೆಯುತ್ತದೆ.

ನಂತರ ಕೂದಲಿಗೆ ಸೀರಮ್ ಅನ್ನು ಬಳಸಿ. ಇದರಿಂದ ಕೂದಲು ನಯವಾಗಿ ಭಾರವಾಗಿಸುತ್ತದೆ. ಇದರಿಂದ ಬೇಗ ಸಿಕ್ಕಾಗುವುದಿಲ್ಲ ಮತ್ತು ಸುರುಳಿ ಸುತ್ತಿಕ್ಕೊಳ್ಳುವುದಿಲ್ಲ.

ಹಾಗೇ ಕೂದಲಿಗೆ ಎಸೆನ್ಷಿಯಲ್ ಆಯಿಲ್ ಅನ್ನು ಬಳಸಿ. ಇದು ಕೂದಲು ಸಿಕ್ಕಾಗುವುದನ್ನು ತಡೆಯುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...