Kannada Duniya

ಮೆಂತೆ ನೀರು ಕುಡಿಯಿರಿ; ದಪ್ಪ ಕೂದಲು ಪಡೆಯಿರಿ

ಮೆಂತೆ ಕಾಳುಗಳನ್ನು ಅಡುಗೆ ಮನೆಯಲ್ಲಿ ಮಾತ್ರ ಬಳಸಬಹುದು ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು. ಮೆಂತ್ಯ ಕಾಳುಗಳು ದೇಹಕ್ಕೆ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಮೆಂತ್ಯೆ ಕಾಳಿನ ನೀರು ಅಥವಾ ಚಹಾ ಸೇವನೆ ಮಾಡುವುದರಿಂದ ಕೂದಲಿಗೆ ಸಂಬಂಧಪಟ್ಟ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ.

ಮೆಂತೆ ಸೊಪ್ಪು ಅಥವಾ ಮೆಂತ್ಯೆ ಕಾಳುಗಳಲ್ಲಿ ಕೂದಲ ಬೇರಿಗೆ ಬೇಕಾಗುವ ಅಗತ್ಯ ಪೋಷಕಾಂಶಗಳಿವೆ. ಇದು ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಮೆಂತೆ ಕಾಳು ಅಥವಾ ಮೆಂತೆ ಸೊಪ್ಪನ್ನು ಆಗಾಗ ಸೇವನೆ ಮಾಡುವುದರಿಂದ ತಲೆ ಕೂದಲು ದಟ್ಟವಾಗಿ ಬೆಳೆಯುತ್ತದೆ. ಒಣ ಚರ್ಮ ಹಾಗೂ ಅಲರ್ಜಿಯಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ. ಮೆಂತೆ ಕಾಳುಗಳನ್ನು ಹಿಂದಿನ ರಾತ್ರಿಯೇ ನೆನೆಹಾಕಿ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು ಇಲ್ಲವೇ ಮೆಂತೆ ಕಾಳುಗಳನ್ನು ಚೆನ್ನಾಗಿ ಕುದಿಸಿ ಚಹಾ ರೂಪದಲ್ಲೂ ಸೇವನೆ ಮಾಡಬಹುದು. ವೈದ್ಯರು ಹೇಳುವ ಪ್ರಕಾರ ಬೆಳಗ್ಗೆ ಖಾಲಿ ಹೊಟ್ಟೆಗೆ ಮೆಂತ್ಯ ನೀರು ಕುಡಿಯುವುದರಿಂದ ದೇಹ ಸ್ವಚ್ಛವಾಗುತ್ತದೆ ಹಾಗೂ ವಿಷಕಾರಿ ಅಂಶಗಳು ದೂರವಾಗುತ್ತವೆ.

Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...