Kannada Duniya

ನೀವು ಚಹಾ ಕುಡಿಯಲು ಯಾವ ಕಪ್ ಬಳಸುತ್ತೀರಿ?

ನೀವು ಬಳಸಿ ಎಸೆಯುವಂತಹ ಕಪ್ ನಲ್ಲಿ ಚಹಾ ಕುಡಿಯುತ್ತಿದ್ದರೆ ಇಂದೇ ನಿಮ್ಮ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ. ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂಬುದನ್ನು ನೆನಪಿಡಿ.

ಪ್ಲಾಸ್ಟಿಕ್ ನಿಂದ ತಯಾರಾಗುವ ಈ ಕಪ್ ಗಳಲ್ಲಿ ದೇಹಕ್ಕೆ ಮಾರಕವಾಗುವ ರಾಸಾಯನಿಕಗಳಿವೆ. ಬಿಸಿ ಚಹ ಅಥವಾ ಕಾಫಿಯನ್ನು ಇದಕ್ಕೆ ಹಾಕಿದಾಗ ಅದರ ಮೈಕ್ರೋ ಪ್ಲಾಸ್ಟಿಕ್ಸ್ ಕಣಗಳು ಕರಗಿ ನಮ್ಮ ದೇಹವನ್ನು ಪ್ರವೇಶಿಸುತ್ತದೆ ಅಂದರೆ ನೀವು ತಿಳಿಯದೆಯೇ ಪ್ಲಾಸ್ಟಿಕ್ ಅನ್ನು ಸೇವಿಸಿದಂತಾಗುತ್ತದೆ. ನಿತ್ಯ ಹೀಗಾದಾಗ ಅದು ಕರುಳಿನಲ್ಲಿ ಸಂಗ್ರಹಗೊಂಡು ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗಬಹುದು ಹಾಗೂ ಅತಿಸಾರದಂತಹ ಕಾಯಿಲೆಗಳಿಗೆ ಕಾರಣವಾಗಬಹುದು.
ಗರ್ಭಿಣಿಯರು ಡಿಸ್ಪೋಸೇಬಲ್ ಕಪ್ ಗಳನ್ನು ತಪ್ಪಿಯೂ ಬಳಸಬಾರದು ಏಕೆಂದರೆ ಇದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.
ಕಾಗದದ ಕಪ್ ಗಳಲ್ಲೂ ಸಾಕಷ್ಟು ಪ್ರಮಾಣದ ರಾಸಾಯನಿಕಗಳಿದ್ದು ಇದು ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಇವುಗಳನ್ನು ಬಳಸುವ ಬದಲು ಸಾಮಾನ್ಯವಾದ ಸ್ಟೀಲ್ ಅಥವಾ ಗಾಜಿನ ಲೋಟದಲ್ಲಿ ಚಹಾ ಕುಡಿಯುವುದು ಬಹಳ ಒಳ್ಳೆಯದು.

Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...