Kannada Duniya

ಕೂದಲನ್ನು ಸ್ಟ್ರೈಟ್ನಿಂಗ್ ಮಾಡಿದರೆ ಕಿಡ್ನಿ ಹಾಳಾಗುತ್ತದೆಯಂತೆ

ಹೆಚ್ಚಿನ ಜನರು ತಮ್ಮ ಕೂದಲು ಸುಂದರವಾಗಿ ಕಾಣಬೇಕೆಂದು ಕೂದಲನ್ನು ಸ್ಟ್ರೈಟ್ನಿಂಗ್ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಬ್ಯೂಟಿ ಪಾರ್ಲರ್ ಗೆ ಹೋಗಿ ದುಬಾರಿ ಹಣ ಖರ್ಚು ಮಾಡುತ್ತಾರೆ. ಆದರೆ ಇದರಿಂದ ನಿಮ್ಮ ಕಿಡ್ನಿ ಡ್ಯಾಮೇಜ್ ಆಗುತ್ತದೆಯಂತೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ತಜ್ಞರು ತಿಳಿಸಿದ ಪ್ರಕಾರ ಕೂದಲನ್ನು ಸ್ಟ್ರೈಟ್ನಿಂಗ್ ಮಾಡಲು ಬಳಸುವ ಕ್ರೀಂನಲ್ಲಿ ಗ್ಲೈ ಆಕ್ಸಿಲಿಕ್ ಆ್ಯಸಿಡ್ ಎಂಬ ರಾಸಾಯನಿಕ್ ಇರುತ್ತದೆ. ಇದು ನೆತ್ತಿಯಲ್ಲಿ ಹುಣ್ಣಿನ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದರಿಂದ ಈ ರಾಸಾಯನಿಕ ಚರ್ಮದ ಮೂಲಕ ರಕ್ತವನ್ನು ಸೇರಿತ್ತದೆ. ಇದು ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದಂತೆ ತಡೆಯುತ್ತದೆ.

ಇದರಿಂದ ಮೂತ್ರಪಿಂಡ, ಮೂತ್ರಕೋಶ, ಮೂತ್ರನಾಳ ಸೇರಿದಂತೆ ಮೂತ್ರದ ವ್ಯವಸ್ಥೆ ಹಾನಿಗೊಳಗಾಗಿರುವುದು ತಿಳಿದುಬಂದಿದೆ. ಇದರಿಂದ ಸಾವು ಸಂಭವಿಸುತ್ತದೆಯಂತೆ. ಹಾಗಾಗಿ ಇಂತಹ ಅಪಾಯಕಾರಿ ರಾಸಾಯನಿಕಗಳಿರುವಂತಹ ಉತ್ಪನ್ನಗಳನ್ನು ಬಳಸುವುದು ತಪ್ಪಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...