Kannada Duniya

ಚೈತ್ರ ಮಾಸದಲ್ಲಿ ಈ ಕೆಲಸಗಳನ್ನು ಮಾಡಬೇಡಿ!

ಮಾರ್ಚ್ 25ರ ಫಾಲ್ಗುಣ ಹುಣ್ಣಿಮೆಯ ನಂತರ ಚೈತ್ರ ಮಾಸ ಪ್ರಾರಂಭವಾಗಿದೆ. ಹಿಂದೂಧರ್ಮದಲ್ಲಿ ಈ ಮಾಸಕ್ಕೆ ವಿಶೇಷವಾದ ಮಹತ್ವವಿದೆ. ಈ ಮಾಸದಲ್ಲಿ ವಿಷ್ಣು, ಲಕ್ಷ್ಮಿ ದೇವಿ ಮತ್ತು ದುರ್ಗೆಯನ್ನು ಪೂಜಿಸಲಾಗುತ್ತದೆ. ಹಾಗಾಗಿ ಈ ಮಾಸದಲ್ಲಿ ಈ ಕೆಲಸಗಳನ್ನು ಮಾಡಬೇಡಿ.

ಚೈತ್ರ ಮಾಸದಲ್ಲಿ ಅಪ್ಪಿತಪ್ಪಿಯೂ ಮಾಂಸಹಾರವನ್ನು ಸೇವಿಸಬೇಡಿ. ಇದರಿಂದ ಲಕ್ಷ್ಮಿದೇವಿ ಅತೃಪ್ತಿಗೊಳ್ಳುವುದರಿಂದ ನಿಮಗೆ ಆರ್ಥಿಕ ಸಮಸ್ಯೆ ಉಂಟಾಗುತ್ತದೆ.

ಚೈತ್ರ ಮಾಸದಲ್ಲಿ ಬೆಲ್ಲವನ್ನು ಸೇವಿಸಬಾರದಂತೆ. ಯಾಕೆಂದರೆ ಬೆಲ್ಲವು ಬಿಸಿಯಾದ ಗುಣವನ್ನು ಹೊಂದಿರುವ ಕಾರಣ ಇದರಿಂದ ಆರೋಗ್ಯ ಕೆಡುತ್ತದೆಯಂತೆ.

ಈ ಮಾಸದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸಬಾರದಂತೆ. ಇದನ್ನು ಬಳಸಿದರೆ ದುರ್ಗಾ ದೇವಿ ಕೋಪಗೊಳ್ಳುತ್ತಾಳಂತೆ. ಹಾಗೇ ಈ ಮಾಸದಲ್ಲಿ ಅಮಲು ಪದಾರ್ಥಗಳನ್ನು ಸೇವಿಸಬಾರದಂತೆ.

ಹಾಗೇ ಈ ಮಾಸದಲ್ಲಿ ಚರ್ಮದಿಂದ ತಯಾರಿಸಿದ ವಸ್ತುಗಳನ್ನು ಬಳಸಬಾರದಂತೆ. ಚರ್ಮದ ವಸ್ತುಗಳ ಬಳಕೆಯಿಂದ ಅಶುಭವಾಗುತ್ತದೆಯಂತೆ.

ಈ ಮಾಸದಲ್ಲಿ ಕೋಪ, ಅಹಂಕಾರವನ್ನು ವ್ಯಕ್ತಪಡಿಸಬಾರದಂತೆ ಮತ್ತು ಕೂದಲು, ಉಗುರುಗಳನ್ನು ಕತ್ತರಿಸಬಾರದಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...