Kannada Duniya

ಬಿಳಿ ಕೂದಲನ್ನು ಕಪ್ಪಾಗಿಸಲು ಈ ಜ್ಯೂಸ್ ಕುಡಿಯಿರಿ

ಹೆಚ್ಚಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಕೂದಲಿಗೆ ಬಣ್ಣ ಹಾಕಿಕೊಳ್ಳುತ್ತಾರೆ. ಅಥವಾ ಹೇರ್ ಪ್ಯಾಕ್ ಗಳನ್ನು ಹಚ್ಚುತ್ತಾರೆ. ಆದರೆ ಕೆಲವು ಜ್ಯೂಸ್ ಕುಡಿಯುವ ಮೂಲಕ ಕೂಡ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಬಹುದಂತೆ.

ಕೂದಲನ್ನು ಕಪ್ಪಾಗಿಸಲು ದಾಸವಾಳ, ಕಪ್ಪುಎಳ್ಳು, ಮತ್ತು ಕರಿಬೇವಿನ ಸೊಪ್ಪಿನಿಂದ ತಯಾರಿಸಿದ ಪಾನೀಯ ಸೇವಿಸಿ. ಕರಿಬೇವು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಕೂದಲನ್ನು ಒಳಗಿನಿಂದ ಕಪ್ಪಾಗಿಸುತ್ತದೆ. ದಾಸವಾಳ ಅಮೈನೋ ಆಮ್ಲವನ್ನು ಹೊಂದಿದ್ದು, ಇದು ಕೂದಲಿಗೆ ಶಕ್ತಿಯನ್ನು ನೀಡುತ್ತದೆ. ಮತ್ತು ಕೂದಲನ್ನು ಫ್ರೀ ರಾಡಿಕಲ್ಸ್ ಗಳಿಂದ ಕಾಪಾಡುತ್ತದೆ. ಹಾಗೇ ಕಪ್ಪು ಎಳ್ಳು ಸತು, ತಾಮ್ರ, ಕಬ್ಬಿಣದಂತಹ ಪೋಷಕಾಂಶಗಳನ್ನು ಹೊಂದಿದ್ದು, ಕೂದಲಿನಲ್ಲಿ ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಹಾಗಾಗಿ ದಾಸವಾಳ ಮತ್ತು ಕರಿಬೇವನ್ನು ಒಂದು ಲೋಟ ನೀರಿನೊಂದಿಗೆ ಬೆರೆಸಿ ಕುದಿಸಿ ಫಿಲ್ಟರ್ ಮಾಡಿ. ನಂತರ ಇದಕ್ಕೆ ಹುರಿದ ಕಪ್ಪು ಎಳ್ಳನ್ನು ಸೇರಿಸಿ ಮಿಶ್ರಣ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...