Kannada Duniya

ಥೈರಾಯ್ಡ್ ಸಮಸ್ಯೆ ಇದ್ದರೆ ದೇಹದ ಈ ಭಾಗಗಳಲ್ಲಿ ನೋವು ಕಂಡುಬರುತ್ತದೆಯಂತೆ

ಥೈರಾಯ್ಡ್ ನಮ್ಮ ಕತ್ತಿನ ಭಾಗದಲ್ಲಿ ಕಂಡುಬರುತ್ತದೆ. ಇದು ಚಿಟ್ಟೆಯಾಕಾರದಲ್ಲಿದ್ದು, ಇದು ಹಾರ್ಮೋನ್ ಗಳನ್ನು ಉತ್ಪಾದಿಸುತ್ತದೆ. ಈ ಹಾರ್ಮೋನ್ ನಲ್ಲಿ ಅಸಮತೋಲವಾದಾಗ ಥೈರಾಯ್ಡ್ ಸಮಸ್ಯೆ ಕಾಡುತ್ತದೆ. ಹಾಗಾಗಿ ಥೈರಾಯ್ಡ್ ಸಮಸ್ಯೆ ಇದ್ದರೆ ದೇಹದ ಈ ಭಾಗಗಳಲ್ಲಿ ನೋವು ಕಂಡುಬರುತ್ತದೆಯಂತೆ.

ಕುತ್ತಿಗೆ ನೋವು : ಥೈರಾಯ್ಡ್ ಸಮಸ್ಯೆ ಇದ್ದಾಗ ಕುತ್ತಿಗೆ ನೋವು ಕಂಡುಬರುತ್ತದೆ. ಯಾಕೆಂದರೆ ಥೈರಾಯ್ಡ್ ಗ್ರಂಥಿಯಲ್ಲಿ ಊತ ಕಂಡುಬರುತ್ತದೆ. ಇದರಿಂದ ಕುತ್ತಿಗೆ ನೋಯುತ್ತದೆ.

ಕಿವಿ ಮತ್ತು ದವಡೆ ನೋವು : ಥೈರಾಯ್ಡ್ ಹಾರ್ಮೋನ್ ನಲ್ಲಿ ಅಸಮತೋಲನ ಉಂಟಾದಾಗ ದವಡೆ ಮತ್ತು ಕಿವಿಗಳಲ್ಲಿ ನೋವು ಕಂಡುಬರುತ್ತದೆ.

ಕೀಲು ನೋವು : ಥೈರಾಯ್ಡ್ ಸಮಸ್ಯೆ ಇದ್ದವರಲ್ಲಿ ಕೀಲು ನೋವಿನ ಸಮಸ್ಯೆ ಕಾಡುತ್ತದೆ. ಇದರಿಂದ ಮಂಡಿ ನೋವಿನ ಸಮಸ್ಯೆ ಹೆಚ್ಚಾಗುತ್ತದೆ.

ಪಾದದ ನೋವು : ಥೈರಾಯ್ಡ್ ಹಾರ್ಮೋನ್ ನಲ್ಲಿ ಅಸಮತೋಲನ ಉಂಟಾದಾಗ ಪಾದಗಳಲ್ಲಿ ನೋವು ಕಂಡುಬರುತ್ತದೆ. ಇದರಿಂದ ನಡೆದಾಡುವಾಗ, ನಿಂತಾಗ ಸಮಸ್ಯೆಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...