Kannada Duniya

ಸೆಳೆಯುವ ಕಾಲುಗಳಿಗೆ ಇಲ್ಲಿದೆ ನೋಡಿ ಸರಳ ಪರಿಹಾರ

ದಿನವಿಡೀ ವಿಪರೀತ ಕೆಲಸ ಮಾಡಿ ಸುಸ್ತಾಗಿ ಬಂದು ಮಲಗಿದಾಗ ಎರಡು ಕಾಲುಗಳಲ್ಲಿ ಸೆಳೆತ ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲ. ಇನ್ನು ಪದೇ ಪದೇ ಈಗ ಸೆಳೆಯುವುದರಿಂದ ಮನಸ್ಸಿಗೂ ಕಿರಿಕಿರಿಯಾಗುತ್ತದೆ. ಇದನ್ನು ಹೇಗೆ ಕಡಿಮೆ ಮಾಡಿಕೊಳ್ಲುಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್!

ಹೀಗಾದಾಗ ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ 10 ನಿಮಿಷಗಳ ಕಾಲ ಮುಳುಗಿಸಿಡುವುದರಿಂದ ನಿಮ್ಮ ಆಯಾಸವೆಲ್ಲ ದೂರವಾಗುತ್ತದೆ ಹಾಗೂ ಉತ್ತಮ ನಿದ್ರೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ.

ಅದೇ ರೀತಿ ದಿನವಿಡೀ ಕೆಲಸ ಮಾಡುವುದರಲ್ಲಿ ವ್ಯಸ್ತರಾಗಿದ್ದ ನಿಮಗೆ ಮೈ ಹಾಗೂ ಕೈಕಾಲುಗಳಲ್ಲಿ ಕಾಣಿಸಿಕೊಳ್ಳುವ ನೋವನ್ನು ಇದು ಕಡಿಮೆ ಮಾಡುತ್ತದೆ. ದಿನವಿಡೀ  ಚಪ್ಪಲಿ ಧರಿಸುವುದರಿಂದ ಉಂಟಾದ ನೋವನ್ನು ಕಡಿಮೆ ಮಾಡಿ, ರಕ್ತದ ಹರಿವು ಸುಧಾರಿಸುವಂತೆ ಮಾಡುತ್ತದೆ.

ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಮರುದಿನ ಎದ್ದ ಬಳಿಕ ನೀನು ಫ್ರೆಶ್ ಆಗಿರುತ್ತೀರಿ ಹಾಗೂ ಹೊಸ ಕೆಲಸಗಳನ್ನು ಹುರುಪಿನಿಂದ ಆರಂಭಿಸುತ್ತೀರಿ. ಉಗುರು ಬೆಚ್ಚಗಿನ ನೀರಿಗೆ ಎರಡು ಹನಿ ನಿಂಬೆ ಅಥವಾ ಉಪ್ಪನ್ನು ಬೆರೆಸುವುದರಿಂದ ದೇಹ ನಿರ್ಮಿಷಗೊಳ್ಳುತ್ತದೆ ಹಾಗೂ ಪಾದಗಳಿಂದ ವಾಸನೆ ಹೊರಸೂಸುವ ಸಮಸ್ಯೆಯೂ ನಿವಾರಣೆಯಾಗುತ್ತದೆ. ಅಂಗಾಲುಗಳಿಗೆ ಸಾಕಷ್ಟು ಆರಾಮವನ್ನು ನೀಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...