Kannada Duniya

ಸಾಸಿವೆ ಎಣ್ಣೆಯಿಂದ ಸಾವಿರ ಪ್ರಯೋಜನಗಳು!

ಸಾಮಾನ್ಯವಾಗಿ ಅಡುಗೆ ಎಣ್ಣೆ ವಿಚಾರಕ್ಕೆ ಬಂದಾಗ ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆಗೆ ಪ್ರಾಮುಖ್ಯತೆ ನೀಡುತ್ತೇವೆ ಈ ಹೊರತು ಸಾಸಿವೆ ಎಣ್ಣೆಯನ್ನು
ನೆನಪಿಸಿಕೊಳ್ಳುವುದು ಕಡಿಮೆ. ಒಮೆಗಾ ತ್ರೀ ಆಮ್ಲಗಳನ್ನು ಹೊಂದಿರುವ ಸಾಸಿವೆ ಎಣ್ಣೆ  ನಮ್ಮ ದೇಹಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.

ಕೆಲವರು ಶೀತದಿಂದ ಉಸಿರು ಕಟ್ಟಿದ ಸಮಸ್ಯೆಗೆ ಒಳಗಾಗುತ್ತಾರೆ. ಅಂಥವರು ಸಾಸಿವೆ ಎಣ್ಣೆಯಿಂದ ಸುಲಭ ಪರಿಹಾರ ಕಂಡುಕೊಳ್ಳಬಹುದು. ಮೊದಲಿಗೆ ಸಾಸಿವೆ ಎಣ್ಣೆಯನ್ನು ಸಣ್ಣ ಉರಿಯಲಿಟ್ಟು ಬಿಸಿ ಮಾಡಿ ಹಾಗೂ ಅದಕ್ಕೆ ನಾಲ್ಕಾರು ಬೆಳ್ಳುಳ್ಳಿ ಸೇರಿಸಿ. ತಣ್ಣಗಾದ ಬಳಿಕ ಡಬ್ಬಿಯಲ್ಲಿ ಸಂಗ್ರಹಿಸಿರಿ ಹಾಗೂ ನಿತ್ಯ ಮಲಗುವ ಮುನ್ನ ಮೂಗಿನ ಹೊಳ್ಳೆಗಳಿಗೆ ಒಂದೊಂದು ಹನಿ ಬಿಟ್ಟುಕೊಂಡರೆ ತಕ್ಷಣ ಪರಿಹಾರ ದೊರೆಯುತ್ತದೆ.

ಹೃದಯದ ಆರೋಗ್ಯಕ್ಕೂ ಸಾಸಿವೆ ಎಣ್ಣೆ ಒಳ್ಳೆಯದು ಎನ್ನಲಾಗಿದೆ. ಇದು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರ ಮೂಲಕ ಹೃದಯದ
ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಅಡುಗೆಗೆ ಸಾಸಿವೆ ಎಣ್ಣೆಯನ್ನು ಬಳಸಬಹುದು.

ಇನ್ನು ಈ ಅವಧಿಯಲ್ಲಿ ಅತಿಯಾಗಿ ಕಾಡುವ ಗಂಟು ಅಥವಾ ಕೀಲು ನೋವಿಗೂ ಸಾಸಿವೆ ಎಣ್ಣೆ ಔಷಧ. ಒಂದೆರಡು ಹನಿ ಸಾಸಿವೆ ಎಣ್ಣೆಯನ್ನು ತುಸು ಬಿಸಿ ಮಾಡಿ ಬಳಿಕ ಎಲ್ಲಿ ನೋವು ಕಂಡುಬರುತ್ತದೋ ಆ ಜಾಗಕ್ಕೆ ಮಸಾಜ್ ಮಾಡಿದರೆ ನೋವು ಬೇಗ ಕಡಿಮೆಯಾಗುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...