Kannada Duniya

ಈ ಕಾಯಿಲೆಯಿಂದ ಬಳಲುತ್ತಿರುವವರು ಸಂಸ್ಕರಿಸಿದ ಎಣ್ಣೆಯಿಂದ ತಯಾರಿಸಿದ ಆಹಾರ ಸೇವಿಸಬೇಡಿ!

ಶುಭ ದಿನಗಳ ಸಮಯದಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಮಾಡುತ್ತಾರೆ. ಹೆಚ್ಚಿನ ಜನರು ಅಡುಗೆಗೆ ಸಂಸ್ಕರಿಸಿದ ಎಣ್ಣೆಯನ್ನು ಬಳಸುತ್ತಾರೆ. ಆದರೆ ಈ ಸಮಸ್ಯೆಯಿಂದ ಬಳಲುತ್ತಿರುವವರು ಸಂಸ್ಕರಿಸಿದ ಎಣ್ಣೆಯನ್ನು ಬಳಸಬಾರದಂತೆ.

ಸಂಸ್ಕರಿಸಿದ ಎಣ್ಣೆಯನ್ನು ಅತಿಯಾಗಿ ಬಳಸುವುದರಿಂದ ಹೃದಯಾಘಾತ, ರಕ್ತದೊತ್ತಡ, ಕೊಲೆಸ್ಟ್ರಾಲ್, ರಕ್ತಹೀನತೆ, ರಕ್ತನಾಳಗಳಲ್ಲಿ ಊತದ ಸಮಸ್ಯೆ ಕಾಡುತ್ತದೆಯಂತೆ. ಇದರಲ್ಲಿವ ಟ್ರಾನ್ಸ್ ಕೊಬ್ಬುಗಳು ಕ್ಯಾನ್ಸರ್ ಮತ್ತು ಪರತಿರಕ್ಷಣಾ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆಯಂತೆ.

ಹಾಗಾಗಿ ಮಧುಮೇಹ, ಹೃದ್ರೋಗ, ಕೊಲೆಸ್ಟ್ರಾಲ್, ರಕ್ತದೊತ್ತಡ, ದುರ್ಬಲ ರೋಗ ನಿರೋಧಕ ಶಕ್ತಿ ಇರುವವರು, ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿರುವವರು ಇಂತಹ ಎಣ್ಣೆಯನ್ನು ಬಳಸಬಾರದಂತೆ. ಈ ಎಣ್ಣೆಯ ಬದಲಿಗೆ ಸೋಯಾಬೀನ್, ಎಳ್ಳೆಣ್ಣೆ, ಸಾಸಿವೆ ಎಣ್ಣೆ, ತೆಂಗಿನ ಎಣ್ಣೆಯನ್ನು ಬಳಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...