Kannada Duniya

ಇಯರ್ ಫೋನ್ ಧರಿಸುವುದರಿಂದ ಪಾರ್ಶ್ವವಾಯು ಸಮಸ್ಯೆ ಕಾಡುತ್ತದೆಯೇ?

ಹೆಚ್ಚಿನ ಜನರು ಕಿವಿಯಲ್ಲಿ ಇಯರ್ ಫೋನ್ ಹಾಕಿಕೊಂಡು ಸಂಗೀತವನ್ನು ಕೇಳುತ್ತಾರೆ. ಇದು ಮನಸ್ಸಿಗೆ ಖುಷಿಯನ್ನು ನೀಡುತ್ತದೆ ನಿಜ. ಆದರೆ ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆಯಂತೆ.

ಕಿವಿಗೆ ಇಯರ್ ಪೋನ್ ಹಾಕಿ ಜೋರಾದ ಶಬ್ದ ಇಡುವುದರಿಂದ ಮೆದುಳಿಗೆ ಹಾನಿಯಾಗುತ್ತದೆಯಂತೆ. ಇದರಿಂದ ಮೆದುಳಿಗೆ ನರಗಳಿಗೆ ಒತ್ತಡ ಬಿದ್ದು ಅವು ದುರ್ಬಲವಾಗುತ್ತವೆ. ಇದರಿಂದ ಪಾರ್ಶ್ವವಾಯುವಿನ ಸಮಸ್ಯೆ ಕಾಡಬಹುದಂತೆ.

ಅಲ್ಲದೇ ಇದರಿಂದ ನೀವು ಕೇಳುವ ಸಾಮರ್ಥ್ಯವನ್ನು ಕೂಡ ಕಳೆದುಕೊಳ್ಳಬಹುದು. ಅಲ್ಲದೇ ಇದು ತಲೆತಿರುಗುವಿಕೆ, ತಲೆನೋವಿನ ಸಮಸ್ಯೆಗೆ ಕಾರಣವಾಗಬಹುದು. ಅಲ್ಲದೇ ಇಯರ್ ಫೋನ್ ನಲ್ಲಿ ಸಂಗ್ರಹವಾದ ಕೊಳೆ ಕಿವಿಗೆ ತಗುಲಿ ಅಲ್ಲಿ ಸೋಂಕು ಉಂಟಾಗಿ ಕಿವಿ ನೋವಿನ ಸಮಸ್ಯೆ ಕಾಡಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...