Kannada Duniya

ನೀವು ಭುಜದ ನೋವಿನಿಂದ ನರಳುತ್ತಿದ್ದರೆ ಈ ಯೋಗಾಸನ ಅಭ್ಯಾಸ ಮಾಡಿ

ಚಳಿಗಾಲದಲ್ಲಿ ಭುಜದ ನೋವಿನ ಸಮಸ್ಯೆ ಹೆಚ್ಚು ಕಾಡುತ್ತಿದೆ. ಇದಕ್ಕೆ ನಾವು ಮಲಗುವ ಭಂಗಿಯೇ ಕಾರಣ. ಇದರಿಂದ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಭುಜದ ನೋವನ್ನು ನಿವಾರಿಸಲು ಈ ಯೋಗಾಸನ ಮಾಡಿ.

ಮತ್ಸ್ಯಾಸನ: ಇದು ದೇಹದ ನಮ್ಯತೆಯನ್ನು ಹೆಚ್ಚಿಸುತ್ತದೆ. ಭುಜದ ನೋವನ್ನು ನಿವಾರಿಸುತ್ತದೆ. ಕಿವಿಯ ಈ ಸಮಸ್ಯೆಯನ್ನು ನಿವಾರಿಸಲು ಮತ್ಸ್ಯಾಸನವನ್ನು ಅಭ್ಯಾಸ ಮಾಡಿ. ಇದು ದೇಹದಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಇದನ್ನು ಮಾಡಲು ಚಾಪೆಯ ಮೇಲೆ ಮಲಗಿ ಅಂಗೈಯನ್ನು ಸೊಂಟದ ಕೆಳಗೆ ಇರಿಸಿ.ಮೊಣಕೈಗಳನ್ನು ಪರಸ್ಪರ ಹತ್ತಿರ ತನ್ನಿ. ನಿಮ್ಮ ಪಾದಗಳನ್ನು ತೊಡೆಯ ಮೇಲೆ ಇರಿಸಿ. ಇದನ್ನು ಮಾಡುವಾಗ ನಿಮ್ಮ ಉಸಿರನ್ನು ಒಳಕ್ಕೆ ಎಳೆಯಿರಿ ಎದೆಯನ್ನು ಮೇಲಕ್ಕೆ ಎತ್ತಿ ನಿಮ್ಮ ಮೊಣಕೈಗಳ ಮೇಲೆ ದೇಹದ ಭಾರವನ್ನು ಹಾಕಿ.

ಭುಜಂಗಾಸನ : ಇದು ಬೆನ್ನು ಮೂಳೆಯಿಂದ ಮೆದುಳಿನ ವರೆಗೂ ಎಲ್ಲಾ ನರಗಳಿಗೆ ಪ್ರಯೋಜನಕಾರಿಯಾದ ಆಸನವಾಗಿದೆ. ಇದು ಕುತ್ತಿಗೆ ಮತ್ತು ಭುಜದ ಬಿಗಿತವನ್ನು ಕಡಿಮೆ ಮಾಡುತ್ತದೆ. ನಿಮ್ಮ ಹೊಟ್ಟೆಯ ಮೇಲೆ ಮಲಗಿ ನಿಮ್ಮ ಅಂಗೈಯನ್ನು ಭುಜದ ನೇರಕ್ಕೆ ಕೆಳಗೆ ಇರಿಸಿ ಕೈಗಳ ಮೇಲೆ ಒತ್ತಡ ಹೇರಿ ದೇಹವನ್ನು ಮೇಲಕ್ಕೆತ್ತಿ. ತಲೆಯನ್ನು ಹಿಂದಕ್ಕೆ ಭಾಗಿಸಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಇಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...