Kannada Duniya

ಹಸ್ತಮೈಥುನ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ?

ಹಸ್ತಮೈಥುನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ನಂಬಿಕೆ ಹಲವರಲ್ಲಿದೆ. ಹಾಗಾಗಿ ಹಸ್ತಮೈಥುನ ಮಾಡಿಕೊಳ್ಳಲು ಕೆಲವರು ಹೆದರುತ್ತಾರೆ. ಹಾಗೇ ಹಸ್ತಮೈಥುನ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಹಸ್ತಮೈಥುನ ಲೈಂಗಿಕ ಪ್ರಚೋದನೆಯಾದ ಕಾರಣ ಇದು ಮೆದುಳಿಗೆ ಲೈಂಗಿಕ ಹಾರ್ಮೋನ್ ಗಳನ್ನು ಬಿಡುಗಡೆ ಮಾಡಲು ಪ್ರಚೋದನೆ ನೀಡುತ್ತದೆ. ಹಾಗೇ ಇದು ಡೋಪಮೈನ್ ಎಂಬ ಸಂತೋಷದ ಹಾರ್ಮೋನ್ ಬಿಡುಗಡೆಗೆ ಕಾರಣವಾಗುತ್ತದೆ. ಇದರಿಂದ ನಿಮಗೆ ಒತ್ತಡದ ಸಮಸ್ಯೆ ಕಾಡುವುದಿಲ್ಲ.

ಹಾಗೇ ಹಸ್ತಮೈಥುನ ಮೆದುಳಿಗೆ ಎಂಡಾರ್ಫಿನ್ ಹಾರ್ಮೋನ್ ಗಳನ್ನು ಉತ್ಪಾದಿಸಲು ಪ್ರೇರೆಪಿಸುತ್ತದೆ. ಇದು ನೋವನ್ನು ಕಡಿಮೆ ಮಾಡುತ್ತದೆ. ಹಾಗೇ ಪ್ರೊಲ್ಯಾಕ್ಟಿನ್ ಎಂಬ ಹಾರ್ಮೋನ್ ಅನ್ನು ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಸಂತಾನೋತ್ಪತ್ತಿ ಮತ್ತು ಒತ್ತಡವನ್ನು ನಿರ್ವಹಣೆಯ ಕೆಲಸ ಮಾಡುತ್ತದೆ.

ಹಾಗೇ ಹಸ್ತಮೈಥುನ ಮೆದುಳಿಗೆ ಅಡ್ರಿನಾಲಿನ್ ಹಾರ್ಮೋನ್ ಅನ್ನು ಬಿಡುಗಡೆಗೊಳಿಸುವಂತೆ ಪ್ರಚೋದಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಹೃದಯ ಬಡಿತ, ರಕ್ತನಾಳ, ಶ್ವಾಸನಾಳ ಮತ್ತು ಚಯಾಪಚಯ ಕ್ರಿಯೆಯನ್ನು ಸಮತೋಲನದಲ್ಲಿಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...