Kannada Duniya

ಕೋಪಿಸಿಕೊಳ್ಳುವ ಬದಲು ಸಂಬಂಧದಲ್ಲಿನ ಏರಿಳಿತವನ್ನು ಈ ರೀತಿಯಲ್ಲಿ ಎದುರಿಸಿ

ಸಂಬಂಧವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸವಾಗಿದೆ. ಯಾಕೆಂದರೆ ಸಂಬಂಧದಲ್ಲಿ ನಾವು ಊಹಿಸಲಾಗದಂತಹ ಸಮಸ್ಯೆಗಳು ಬಂದು ಕಾಡುತ್ತದೆ. ಹಾಗಾಗಿ ಸಂದರ್ಭದಲ್ಲಿ ನೀವು ಕೋಪಿಸಿಕೊಳ್ಳುವ ಬದಲು ಸಂಬಂಧವನ್ನು ನಿಭಾಯಿಸಲು ಈ ಸಲಹೆ ಪಾಲಿಸಿ.

ಸಂಬಂಧದಲ್ಲಿ ನೀವು ಎಷ್ಟೇ ಜಗಳ ಮಾಡಿದರೂ ಕೂಡ ಮಾತನಾಡುವುದನ್ನು ನಿಲ್ಲಿಸಬೇಡಿ. ಇದರಿಂದ ಪರಿಸ್ಥಿತಿ ಹದಗೆಡುವುದಿಲ್ಲ. ಹಾಗೇ ಕೋಪಿಸಿಕೊಂಡವರಿಗೆ ನಿಮ್ಮ ಮೇಲೆ ಪ್ರೀತಿ ಹುಟ್ಟಿ ಮತ್ತೆ ಮೊದಲಿನಂತಾಗಬಹುದು.

ಹಾಗೇ ಸಂಬಂಧದಲ್ಲಿ ಜಗಳವಾದರೆ ಅದಕ್ಕೆ ಕೋಪಿಸಿಕೊಳ್ಳುವ ಬದಲು ಜಗಳದ ಕಾರಣಗಳನ್ನು ಅರ್ಥ ಮಾಡಿಕೊಳ್ಳಿ. ಇದರಿಂದ ಯಾರ ಕಡೆ ತಪ್ಪಾಗಿದೆ ಎಂಬುದು ತಿಳಿಯುತ್ತದೆ.

ನಿಮ್ಮ ಸಂಬಂಧದಲ್ಲಿ ಜಗಳವಾಗುತ್ತಿದ್ದರೆ ಅದನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ. ಇಲ್ಲವಾದರೆ ಬೇರೆಯವರ ಸಹಾಯ ಪಡೆಯಿರಿ. ಅವರ ಮಾರ್ಗದರ್ಶನದಿಂದ ನೀವು ಸರಿ ತಪ್ಪನ್ನು ಅರ್ಥಮಾಡಿಕೊಳ್ಳಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...