Kannada Duniya

Sleepy after eating Rice : ಅನ್ನ ತಿಂದ ಬಳಿಕ ನಿದ್ರೆ ಬರುವುದು ಯಾಕೆ ಗೊತ್ತಾ….?

ಹೆಚ್ಚಿನವರಿಗೆ ಅಕ್ಕಿ ಪ್ರಮುಖ ಆಹಾರವಾಗಿದೆ. ಕೆಲವರಿಗೆ ಅನ್ನವಿಲ್ಲದಿದ್ದರೆ ಊಟವೇ ಅಪೂರ್ಣವೆನಿಸುತ್ತದೆ. ಆದರೆ ಈ ರುಚಿಕರವಾದ ಆಹಾರದ ದೌರ್ಬಲ್ಯವೆನೆಂದರೆ ಅದನ್ನು ಸೇವಿಸಿದ ತಕ್ಷಣ ನಿದ್ರೆ ಬರುತ್ತದೆ. ಈ ನಿದ್ರೆಯನ್ನು ನಿಯಂತ್ರಿಸುವುದು ಬಹಳ ಕಷ್ಟ. ವಿಶೇಷವಾಗಿ ನೀವು ಕಚೇರಿಯಲ್ಲಿ ಊಟದ ಸಮಯದಲ್ಲಿ ಅನ್ನವನ್ನು ಸೇವಿಸಿದರೆ ಈ ಸಮಸ್ಯೆ ಕಾಡುತ್ತದೆ. ಇದಕ್ಕೆ ಕಾರಣವೇನು ಗೊತ್ತಾ?

ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಗಳು ಸಮೃದ್ಧವಾಗಿದೆ. ಕಾರ್ಬೋಹೈಡ್ರೇಟ್ ಗಳನ್ನು ಸೇವಿಸಿದಾಗಲೆಲ್ಲಾ ಅವು ಗ್ಲೂಕೋಸ್ ಆಗಿ ಬದಲಾಗುತ್ತದೆ. ಇದರಿಂದ ಇನ್ಸುಲಿನ್ ಪ್ರಮಾಣ ಹೆಚ್ಚಾಗಿ ಅದು ಅಗತ್ಯವಾದ ಕೊಬ್ಬಿನಾಮ್ಲವನ್ನು ಸ್ರವಿಸಲು ಮೆದುಳನ್ನು ಪ್ರೇರೆಪಿಸುತ್ತದೆ. ಇದರಿಂದ ನಿದ್ರೆಯ ಹಾರ್ಮೋನ್ ಗಳು ಉತ್ಪತ್ತಿಯಾಗಿ ನಿದ್ರೆ ಬರುತ್ತದೆ. ಇದು ಸಾಮಾನ್ಯವಾಗಿ ಎಲ್ಲರಲ್ಲೂ ಆಗುತ್ತದೆ.

Green Tea: ನಿಮ್ಮ ಆರೋಗ್ಯಕ್ಕೆ ಗ್ರೀನ್ ಟೀಗೆ ಇದನ್ನು ಮಿಕ್ಸ್ ಮಾಡಿ ಸೇವಿಸಿ…!

ಹಾಗಾಗಿ ನೀವು ಮಧ್ಯಾಹ್ನದ ಊಟದಲ್ಲಿ ಅನ್ನವನ್ನು ಹೆಚ್ಚು ಸೇವಿಸಬೇಡಿ. ಯಾಕೆಂದರೆ ನೀವು ಹೆಚ್ಚು ತಿಂದಾಗ ಅದನ್ನು ಜೀರ್ಣಿಸಿಕೊಳ್ಳಲು ನಿಮ್ಮ ದೇಹವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ, ಇದು ಹೆಚ್ಚು ನಿದ್ರೆಗೆ ಕಾರಣವಾಗುತ್ತದೆ. ತಜ್ಞರ ಪ್ರಕಾರ ನಿಮ್ಮ ದೈನಂದಿನ ಆಹಾರದಲ್ಲಿ 50% ತರಕಾರಿ , 25% ಪ್ರೋಟೀನ್ ಮತ್ತು 25% ಕಾರ್ಬೋಹೈಡ್ರೇಟ್ ಗಳಿರಬೇಕು.

 

Why eating rice leads to sleep in the afternoons


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...