Kannada Duniya

Reletionship: ದಾಂಪತ್ಯ ಗಟ್ಟಿಗೊಳಿಸುವ ಟಿಪ್ಸ್ ಗಳಿವು

ನಿಮ್ಮ ದಾಂಪತ್ಯವನ್ನು ಗಟ್ಟಿಗೊಳಿಸಲು ದೊಡ್ಡ ದೊಡ್ಡ ಗಿಫ್ಟ್ ಗಳೇ ಬೇಕಿಲ್ಲ. ಸಣ್ಣ ಸಣ್ಣ ವಿಷಯಗಳು ಕೂಡಾ ನಿಮ್ಮ ಸಂಗಾತಿ ನಿಮ್ಮೆಡೆಗೆ ಮತ್ತಷ್ಟು ಆಕರ್ಷಕರಾಗುವಂತೆ ಮಾಡಬಹುದು. ಅದು ಹೇಗೆನ್ನುತ್ತೀರಾ?

 

ಪ್ರತಿ ದಿನ ಬೆಳಿಗ್ಗೆ ಎದ್ದಾಕ್ಷಣ ನಿಮ್ಮ ಸಂಗಾತಿಗೊಂದು ಅಪ್ಪುಗೆ ಹಾಗೂ ಸಿಹಿಮುತ್ತು ಕೊಡಲು ಮರೆಯದಿರಿ. ಹಿಂದಿನ ದಿನ ಅದೆಷ್ಟೇ ಜಗಳಗಳಾಗಿದ್ದರೂ ಬೆಳಗ್ಗಿನ ಈ ಮುತ್ತು ಎಲ್ಲಾ ನೋವನ್ನು ಮರೆಸಿ ನಿಮ್ಮ ಹಾಗೂ ಸಂಗಾತಿಯ ದಿನವನ್ನು ಫ್ರೆಶ್ ಆಗಿಸುತ್ತದೆ.

 

ಅದೇ ರೀತಿ ಕಚೇರಿಗೆ ತೆರಳುವ ಮುನ್ನ ಇದನ್ನೇ  ಪುನರಾವರ್ತಿಸಿ. ಒಂದು ಸಿಹಿ ಮುತ್ತು ಹಾಗೂ ಪ್ರೀತಿಯ ವಿದಾಯ ಸಂಗಾತಿಗೆ ದಿನವಿಡೀ ಹುರುಪಿನಿಂದ ಕೆಲಸ ಮಾಡಲು ಪ್ರೇರಣೆ ಕೊಡಬಹುದು.

 

ಸಂಗಾತಿಯ ಕನಸು, ಮಾತು, ರಹಸ್ಯಗಳನ್ನು ಗೌಪ್ಯವಾಗಿಡಿ. ಯಾವುದೇ ಕಾರಣಕ್ಕೆ ಅದನ್ನು ಇತರರೊಡನೆ ಹಂಚಿಕೊಳ್ಳದಿರಿ. ಅದರ ಆಧಾರದ ಮೇಲೆ ಜೋಕ್ ಹಾರಿಸುವುದು, ತಮಾಷೆ ಮಾಡುವುದು ಮೊದಲಾದ ತಪ್ಪನ್ನು ಮಾಡದಿರಿ. ಇದು ನಿಮ್ಮ ಮೇಲಿನ ನಂಬಿಕೆಯನ್ನು ದುಪ್ಪಟ್ಟುಗೊಳಿಸುತ್ತದೆ.

 

ಈರುಳ್ಳಿಯನ್ನು ಖರೀದಿಸುವಾಗ ಈ ವಿಚಾರ ತಿಳಿದಿರಲಿ

 

ಸಂಗಾತಿಗಾಗಿ ಸಮಯವಿಡುವುದು, ತಿಂಗಳಿಗೊಮ್ಮೆ ಶಾಪಿಂಗ್ ಹೋಗುವುದು, ಸಿನೆಮಾ ವೀಕ್ಷಿಸುವುದು, ಜೊತೆಯಾಗಿ ಸಮಯ ಕಳೆಯುವುದನ್ನು ತಪ್ಪಿಸದಿರಿ. ನಿಮ್ಮ ಖುಷಿ ಹೆಚ್ಚಿಸುವ ಇವು ದಾಂಪತ್ಯವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ ಎಂಬುದನ್ನು ನೆನಪಿಡಿ.

 

Tips to strengthen your relationship with partner


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...