Kannada Duniya

ಲವ್/ಅರೇಂಜ್ ಮ್ಯಾರೇಜ್, ಯಾವುದು ಬೆಸ್ಟ್?

ಲವ್ ಮ್ಯಾರೇಜ್ ಗಳಲ್ಲಿ ಹೊಂದಾಣಿಕೆ ಹೆಚ್ಚಿರುತ್ತದೆ ಎಂದು ವಾದಿಸುವವರು ನೀವಾಗಿದ್ದರೆ ಇಲ್ಲಿ ಕೇಳಿ. ಲವ್ ಮ್ಯಾರೇಜ್ ಗೆ ಹೋಲಿಸಿದರೆ ಅರೇಂಜ್ಡ್ ಮ್ಯಾರೇಜ್ ಗಳಲ್ಲಿ ವಿಚ್ಛೇದನದ ಪ್ರಮಾಣ ಕಡಿಮೆ ಎಂಬುದು ಎಲ್ಲರೂ ಒಪ್ಪಬೇಕಾದ ವಿಚಾರ. ಹಾಗಿದ್ದರೆ ಅರೇಂಜ್ಡ್ ಮ್ಯಾರೇಜ್ ವಿಶೇಷತೆ ಏನು?

ಅರೇಂಜ್ಡ್ ಮ್ಯಾರೇಜ್ ನಲ್ಲಿ ಎರಡು ಕುಟುಂಬಗಳು ಒಟ್ಟಾಗುವುದರಿಂದ ಅವರ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ಮಕ್ಕಳು ಜೀವನಪೂರ್ತಿ ಸುಖವಾಗಿರಬೇಕು ಎಂದು ಬಯಸುವ ಕುಟುಂಬದ ಮಂದಿ ಕಷ್ಟಕಾಲದಲ್ಲಿ ಜೊತೆಯಾಗಿ ನಿಂತು ಬೆಂಬಲ ನೀಡುತ್ತಾರೆ. ಅದು ಪ್ರೇಮವಿವಾಹದಲ್ಲಿ ಕಾಣಿಸುವುದಿಲ್ಲ.

ಅರೇಂಜ್ ಮ್ಯಾರೇಜ್ ನಲ್ಲಿ ನಂಬಿಕೆಯೇ ಮುಖ್ಯವಾಗುವುದರಿಂದ ಹೃದಯ ಒಡೆಯುವಂಥ ಘಟನೆಗಳು ಸಂಭವಿಸುವುದಿಲ್ಲ, ಅಂತಹ ಶಾಕಿಂಗ್ ಘಟನೆಗಳು ನಡೆದರೂ ಕುಟುಂಬದ ಮಂದಿ ಜೊತೆಯಾಗಿ ನಿಂತು ಸಮಸ್ಯೆ ಬಗೆಹರಿಸುತ್ತಾರೆ.

ಓದಿ ಕಲಿತು, ಉದ್ಯೋಗ ದೊರೆತು ಸ್ವಂತ ಮನೆ ಕಾರು ಹೊಂದಿದ ಬಳಿಕವೇ ಅರೇಂಜ್ ಮ್ಯಾರೇಜ್ ಗೆ ಸಿದ್ಧತೆ ನಡೆಯುತ್ತದೆ. ಆಗ ನೀವು ಸೆಟಲ್ ಆಗಿರುತ್ತೀರಿ ಹಾಗೂ ತಕ್ಕ ಮಟ್ಟಿನ ಮೆಚ್ಯುರಿಟಿಯೂ ಬಂದಿರುತ್ತದೆ. ಲವ್ ಮ್ಯಾರೇಜ್ ಗಳಲ್ಲಿ ಈ ನಿಯಮ ಕಡ್ಡಾಯವಿಲ್ಲ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...