Kannada Duniya

ಏಪ್ರಿಲ್ 13ರಂದು ಸೂರ್ಯ-ಗುರುವಿನ ಸಂಯೋಗ; ಈ ರಾಶಿಯವರು ಐಷರಾಮಿ ಜೀವನ ನಡೆಸಲಿದ್ದಾರೆ

ಗ್ರಹಗಳು ತನ್ನ ರಾಶಿಚಕ್ರವನ್ನು ಬದಲಾಯಿಸಿದಾಗ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆ. ಅದರಂತೆ ಏಪ್ರಿಲ್ 13ರಂದು ಸೂರ್ಯನು ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಈಗಾಗಲೇ ಮೇಷರಾಶಿಯಲ್ಲಿ ಗುರುವು ಇರುವ ಕಾರಣ ಸೂರ್ಯ ಮತ್ತು ಗುರುವಿನ ಸಂಯೋಗವಾಗಲಿದೆ. ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆ.

ಮಿಥುನ ರಾಶಿ : ನಿಮ್ಮ ಜೀವನದಲ್ಲಿ ಸಂತೋಷ ನೆಲೆಸುತ್ತದೆ. ಉದ್ಯೋಗದಲ್ಲಿ ಒಳ್ಳೆಯ ಸುದ್ದಿಗಳು ಸಿಗಲಿದೆ. ನೀವು ಗುರು ಹಿರಿಯರ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಲಭಿಸುತ್ತದೆ.

ಕಟಕ ರಾಶಿ : ನೀವು ವ್ಯಾಪಾರದಲ್ಲಿ ಲಾಭವನ್ನು ಪಡೆಯುತ್ತೀರಿ. ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ. ನಿಮಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾದರೂ ಅದು ಶೀಘ್ರದಲ್ಲಿಯೇ ಪರಿಹಾರವಾಗುತ್ತದೆ.

ಸಿಂಹ ರಾಶಿ : ನೀವು ಅದೃಷ್ಟದ ಸಂಪೂರ್ಣವಾದ ಬೆಂಬಲವನ್ನು ಪಡೆಯುತ್ತೀರಿ. ನಿಮಗೆ ಕೆಲಸದಲ್ಲಿ ಪ್ರಶಂಸೆ ದೊರೆಯಲಿದೆ. ಎಲ್ಲಾ ಕ್ಷೇತರದಲ್ಲೂ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...