Kannada Duniya

ಮಾರ್ಚ್ 31ರಂದು ರಾಹು-ಶುಕ್ರನ ಸಂಯೋಗ; ಈ ರಾಶಿಯವರಿಗೆ ಯಶಸ್ಸು ಲಭಿಸಲಿದೆ

ಗ್ರಹಗಳ ರಾಶಿ ಚಿಹ್ನೆಗಳ ಬದಲಾದಾಗ ಅದು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದರಂತೆ ಮಾರ್ಚ್ 31ರಂದು ಶುಕ್ರನು ಧನು ರಾಶಿಗೆ ಪ್ರವೇಶಿಸಲಿದ್ದಾನೆ. ರಾಹು ಈಗಾಗಲೇ ಧನು ರಾಶಿಯಲ್ಲಿದ್ದು, ಇದರಿಂದ ಶುಕ್ರ ಮತ್ತು ರಾಹುವಿನ ಸಂಯೋಗವಾಗಲಿದೆ. ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆ.

ಕಟಕ ರಾಶಿ : ಇವರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣವಾಗಲಿವೆ. ನಿಮ್ಮ ಸಂಪತ್ತು ವೃದ್ಧಿಯಾಗಲಿದೆ. ನೀವು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಒಳ್ಳೆಯದ ಸಮಯವನ್ನು ಕಳೆಯುತ್ತೀರಿ.

ವೃಶ್ಚಿಕ ರಾಶಿ : ನಿಮ್ಮ ಜೀವನದಲ್ಲಿ ಸಂತೋಷದ ದಿನಗಳು ಬರಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ನೆಲೆಸುತ್ತದೆ. ಭವಿಷ್ಯವನ್ನು ರೂಪಿಸಿಕೊಳ್ಳಲು ಅನೇಕ ಅವಕಾಶಗಳು ಸಿಗುತ್ತದೆ. ಮಕ್ಕಳಿಂದ ನಿಮಗೆ ಸಂತಸದ ವಿಚಾರ ಸಿಗಲಿದೆ.

ಕನ್ಯಾರಾಶಿ : ನೀವು ವ್ಯಾಪಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಬಡ್ತಿ ಪಡೆಯುತ್ತೀರಿ. ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಕುಟುಂಬದವರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...