Kannada Duniya

ಬುಧ-ಶುಕ್ರರ ಸಂಯೋಗದಿಂದ ಲಕ್ಷ್ಮಿನಾರಾಯಣ ರಾಜಯೋಗ ರಚನೆ; ಈ ರಾಶಿಯವರಿಗೆ ಒಳ್ಳೆಯದಾಗಲಿದೆ

ಗ್ರಹಗಳು ಸಂಯೋಗದಿಂದ ರಾಜಯೋಗಗಳು ಸೃಷ್ಟಿಯಾಗಲಿದ್ದು, ಇದರಿಂದ ವ್ಯಕ್ತಿಯ ಜೀವನದ ಮೇಲೆ ಶುಭ ಅಶುಭ ಪರಿಣಾಮಗಳು ಬೀರಲಿವೆ. ಅಂದಹಾಗೇ ಏಪ್ರಿಲ್ ನಲ್ಲಿ ರಾಶಿಯಲ್ಲಿ ಶುಕ್ರ ಮತ್ತು ಬುಧನ ಸಂಯೋಗವಾಗಲಿದೆ. ಮೀನ ರಾಶಿಯಲ್ಲಿ ಈಗಾಗಲೇ ಶುಕ್ರನಿದ್ದು, ಏಪ್ರಿಲ್ 9ರಂದು ಬುಧನು ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಲಕ್ಷ್ಮಿನಾರಾಯಣ ರಾಜಯೋಗ ರಚನೆಯಾಗಲಿದ್ದು, ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ.

ಧನು ರಾಶಿ : ಈ ಸಮಯದಲ್ಲಿ ನೀವು ಹಠಾತ್ ಧನ ಲಾಭವನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನೀವು ವೃತ್ತಿ ಜೀವನದಲ್ಲಿ ಪ್ರಗತಿ ಕಾಣುತ್ತೀರಿ. ನಿಮಗೆ ಹಣ ಸಂಪಾದಿಸಲು ಉತ್ತಮ ಅವಕಾಶಗಳು ಸಿಗಲಿದೆ.

ಮೇಷ ರಾಶಿ : ನೀವು ವೃತ್ತಿ ಜೀವನ ಮತ್ತು ವ್ಯವಹಾರದಲ್ಲಿ ಏಳಿಗೆ ಕಾಣುತ್ತೀರಿ. ಕೆಲಸದ ಸ್ಥಳದಲ್ಲಿ ನೀವು ಬಯಸಿದ ಫಲಿತಾಂಶ ಸಿಗಲಿದೆ. ನೀವು ಚೆನ್ನಾಗಿ ಹಣವನ್ನು ಉಳಿತಾಯ ಮಾಡಬಹುದು. ನಿರುದ್ಯೋಗಿಗಳಿವೆ ಉತ್ತಮ ಅವಕಾಶಗಳು ಸಿಗಲಿವೆ.

ತುಲಾ ರಾಶಿ : ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಾಗಬಹುದು. ನೀವು ಎಲ್ಲಾ ಕ್ಷೇತ್ರದಲ್ಲೂ ಪ್ರಗತಿಯನ್ನು ಕಾಣುತ್ತೀರಿ. ನೀವು ಹಳೆಯ ಹೂಡಿಕೆಯಿಂದ ಲಾಭ ಪಡೆಯುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...