Kannada Duniya

ಹೋಲಿಕಾ ದಹನದ ದಿನ ಈ ತಂತ್ರಗಳನ್ನು ಮಾಡಿದರೆ ಸಮಸ್ಯೆಗಳನ್ನು ನಿವಾರಿಸಬಹುದು

ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ರಾತ್ರಿ ಹೋಲಿಕಾ ದಹನವನ್ನು ಆಚರಿಸಲಾಗುತ್ತದೆ. ಈ ದಿನ ಕೆಟ್ಟ ದನ್ನು ಸುಟ್ಟು ಹಾಕಿ ಧರ್ಮವನ್ನು ಸ್ಥಾಪಿಸುವುದು ಅದರ ಸಂಕೇತವಾಗಿದೆ. ಹಾಗಾಗಿ ಈ ದಹನದ ಬೆಂಕಿಗೆ ಕೆಲವು ವಸ್ತುಗಳನ್ನು ಹಾಕಿದರೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ.

ಹೋಲಿಕಾ ದಹನಕ್ಕೆ 7 ವೀಳ್ಯದೆಲೆಯನ್ನು ಹಾಕಿ ದಹನದ ಬೆಂಕಿಗೆ 7 ಸುತ್ತು ಪ್ರದಕ್ಷಿಣೆ ಹಾಕಿದರೆ ನಿಮ್ಮ ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆಯಂತೆ.

ನಿಮ್ಮ ವೃತ್ತಿ ಜೀವನ ಉತ್ತಮವಾಗಿರಲು ಹೋಲಿ ದಹನದ ಬೆಂಕಿಗೆ ನಿಂಬೆ ಹಣ್ಣನ್ನು ಹಾಕಿ. ಇದರಿಂದ ಕೆಟ್ಟ ಶಕ್ತಿಗಳು ನಿವಾರಣೆಯಾಗುತ್ತದೆ.

ಹಾಗೇ ಹೋಲಿ ದಹನದ ಬೆಂಕಿಗೆ ಗೋಮತಿ ಚಕ್ರ ಮತ್ತು ಸಕ್ಕರೆಯನ್ನು ಹಾಕಿದರೆ ಲಕ್ಷ್ಮಿದೇವಿಯ ಅನುಗ್ರಹ ನಿಮಗೆ ದೊರೆತು ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ.

ಹಾಗೇ ಹೋಲಿ ದಹನದ ಭಸ್ಮವನ್ನು ಮನೆಗೆ ತಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯ ಮುಖ್ಯ ಬಾಗಿಲಿನ ಬಳಿ ನೇತು ಹಾಕಿದರೆ ಕೆಟ್ಟ ಶಕ್ತಿ ಮನೆಗೆ ಪ್ರವೇಶಿಸುವುದಿಲ್ಲವಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...