Kannada Duniya

ನಿಮ್ಮ ಮಕ್ಕಳು ನೀವು ಹೇಳುವುದನ್ನು ನಿರ್ಲಕ್ಷಿಸಲು ಕಾರಣವೇನು ಗೊತ್ತಾ?

ಪೋಷಕರಾಗುವುದು ಬಹಳ ಜವಾಬ್ದಾರಿಯುತ ಕೆಲಸ. ಯಾಕೆಂದರೆ ಮಕ್ಕಳ ಲಾಲನೆ ಪಾಲನೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಮಕ್ಕಳು ಬೆಳೆಯುತ್ತಿದ್ದಂತೆ ಅವರ ವರ್ತನೆಯಲ್ಲಿ ವ್ಯತ್ಯಾಸವಾಗುತ್ತದೆ. ಕೆಲವು ಮಕ್ಕಳು ನೀವು ಹೇಳುವುದನ್ನು ನಿರ್ಲಕ್ಷಿಸಲು ಶುರು ಮಾಡುತ್ತಾರೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯಿರಿ.

ಮಕ್ಕಳು ದೊಡ್ಡವರಾದ ಮೇಲೆ ಸ್ವಾತಂತ್ರರಾಗಲು ಬಯಸುತ್ತಾರೆ. ಮನೆಯಿಂದ ಹೊರಗೆ ಹೋಗುತ್ತಾರೆ. ಆ ಸಮಯದಲ್ಲಿ ನೀವು ಅದಕ್ಕೆ ಅಡ್ಡಿಪಡಿಸಿದರೆ ಅವರು ಕೋಪಗೊಂಡು ನಿಮ್ಮ ಮಾತನ್ನು ನಿರ್ಲಕ್ಷಿಸುತ್ತಾರೆ.

ಮಕ್ಕಳಿಗೆ ನೀವು ಅವರಿಗೆ ಇಷ್ಟವಾದ ಕೆಲಸಗಳನ್ನು ಮಾಡಲು ಬಿಡುವುದಿಲ್ಲ. ನೀವು ಅದನ್ನು ವಿರೋಧಿಸುತ್ತೀರಿ. ಇದರಿಂದ ಅವರು ರೊಚ್ಚಿಗೆದ್ದು ನಿಮ್ಮ ಮಾತನ್ನು ಕಡೆಗಣಿಸುತ್ತಾರೆ.

ಮಕ್ಕಳು ಬೆಳೆಯುತ್ತಿದ್ದಂತೆ ಅವರಿಗೆ ಯಾರು ಆದೇಶ ನೀಡಬಾರದು ಎಂದು ಬಯಸುತ್ತಾರೆ. ಆದರೆ ನೀವು ಅವರಿಗೆ ಅದು ಮಾಡು ಇದು ಮಾಡು ಎಂದು ಆದೇಶ ನೀಡಿದರೆ ಅವರು ಕಿರಿಕಿರಿಗೊಳ್ಳುತ್ತಾರೆ. ಆಗ ನಿಮ್ಮ ಮಾತನ್ನು ಕೇಳುವುದಿಲ್ಲ.

ಮಕ್ಕಳು ಕೂಡ ವಯಸ್ಕರಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಆದರೆ ಅದಕ್ಕೆ ನೀವು ಅವಕಾಶ ಕೊಡದಿದ್ದಾಗ ಅವರು ನಿಮ್ಮ ಮೇಲೆ ಕೋಪಗೊಂಡು ನಿಮ್ಮ ಮಾತನ್ನು ನಿರ್ಲಕ್ಷಿಸುತ್ತಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...