Kannada Duniya

ಮಕ್ಕಳು ಪೋಷಕರೊಂದಿಗೆ ಮಲಗುವುದು ಉತ್ತಮವೇ?

ಕೆಲವರು ಪೋಷಕರು ಮಕ್ಕಳನ್ನು ತಮ್ಮ ಜೊತೆಯಲ್ಲೇ ಮಲಗಿಸಿಕೊಂಡರೆ ವಿದೇಶಿಗರು ಮಕ್ಕಳು ಬೆಳೆಯುತ್ತಿದ್ದಂತೆ ಅವರನ್ನು ಬೇರೆಯಾಗಿ ಮಲಗಿಸುತ್ತಾರೆ. ಆದರೆ ಈ ರೀತಿ ಮಾಡುವುದು ಮಕ್ಕಳಿಗೆ ಒಳ್ಳೆಯದೇ? ಕೆಟ್ಟದೇ? ಎಂಬುದನ್ನು ತಿಳಿದುಕೊಳ್ಳಿ.

ತಜ್ಞರು ತಿಳಿಸಿದ ಪ್ರಕಾರ ಮಕ್ಕಳು 7 ವರ್ಷಕ್ಕೆ ಬರುವ ತನಕ ಅವರನ್ನು ಪೋಷಕರು ತಮ್ಮ ಜೊತೆಯಲ್ಲಿ ಮಲಗಿಸುವುದು ಸೂಕ್ತವಂತೆ. ಇದರಿಂದ ಮಕ್ಕಳು ಮತ್ತು ಹೆತ್ತವರ ನಡುವಿನ ಭಾವನಾತ್ಮಕ ಸಂಬಂಧ ಬಲಗೊಳ್ಳುತ್ತದೆ. ಇಲ್ಲವಾದರೆ ಮಗುವಿಗೆ ತನ್ನ ಪೋಷಕರ ಮೇಲೆ ಬೇಸರವಾಗಬಹುದು.

ಅಲ್ಲದೇ ಕೆಲವು ಮಕ್ಕಳು ರಾತ್ರಿ ಭಯದಿಂದ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳಬಹುದು. ಇದು ಅವರಿಗೆ ಅಭ್ಯಾಸವಾಗಿ ಪರಿಣಮಿಸಬಹುದು. ಅಲ್ಲದೇ ಇದು ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆಯಂತೆ. ಇದರಿಂದ ಕೆಲವು ಮಕ್ಕಳು ಒತ್ತಡಕ್ಕೆ ಒಳಗಾಗುತ್ತಾರೆ.

ಹಾಗೇ ಮಕ್ಕಳನ್ನು ಪ್ರತ್ಯೀಕವಾಗಿ ಮಲಗಿಸುವ ಮುನ್ನ ಅವರನ್ನು ಮಾನಸಿಕವಾಗಿ ರೆಡಿ ಮಾಡಿಸಿ. ಮಕ್ಕಳು ಮಲಗುವ ಕೋಣೆಯ ಬಾಗಿಲನ್ನು ಮುಚ್ಚಬೇಡಿ ಮತ್ತು ಮಕ್ಕಳು ಮಲಗಿದ್ದಾರೆಯೇ ಇಲ್ಲವೇ ಎಂಬುದನ್ನು ಗಮನಿಸುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...