Kannada Duniya

ಮಕ್ಕಳು ಇತರರೊಂದಿಗೆ ಸ್ನೇಹದ ರೀತಿಯಲ್ಲಿ ವರ್ತಿಸಲು ಈ ಸಲಹೆ ಪಾಲಿಸಿ

ಮಕ್ಕಳು ಯಾವಾಗಲೂ ಹೊಸ ಜನರೊಂದಿಗೆ ಬೆರೆಯಲು ಹಿಂಜರಿಯುತ್ತಾರೆ. ಇದನ್ನು ಸಾಮಾನ್ಯವೆಂದು ಪರಿಗಣಿಸಬಾರದು. ಯಾಕೆಂದರೆ ಇದು ಮುಂದೆ ಮಕ್ಕಳು ಯಾರ ಜೊತೆಯೂ ಬೆರೆಯದೇ ಏಕಾಂಗಿಯಾರುವಂತೆ ಮಾಡುತ್ತದೆ. ಹಾಗಾಗಿ ಪೋಷಕರು ಮಕ್ಕಳು ಇತರರೊಂದಿಗೆ ಬೆರೆಯುವಂತೆ ಮಾಡಲು ಈ ಸಲಹೆ ಪಾಲಿಸಿ.

ನಿಮ್ಮ ಮಕ್ಕಳಿಗೆ ಶಿಷ್ಟಾಚಾರವನ್ನು ಕಲಿಸಿ. ಮಕ್ಕಳು ವಯಸ್ಸಾದವರ ಜೊತೆ ಮಾತನಾಡುವಾಗ ಅವರಿಗೆ ಗೌರವ ಕೊಡುವುದನ್ನು ಕಲಿಸಬೇಕು. ಅವರನ್ನು ‘ನೀವು’ ಎಂಬ ಪದ ಬಳಸಿ ಕರೆಯುವಂತೆ ಕಲಿಸಿಕೊಡಬೇಕು.

ಹಾಗೇ ಮಕ್ಕಳೊಂದಿಗೆ ನೀವು ಮಾತನಾಡುವಾಗ ಕಣ್ಣಿನ ಸಂಪರ್ಕದಿಂದ ಮಾತನಾಡಿ. ಅವರ ಮಾತನ್ನು ಕೇಳಿ ತಾಳ್ಮೆಯಿಂದ ಉತ್ತರಿಸಿ. ಇದರಿಂದ ಅವರು ಅದನ್ನು ಕಲಿತುಕೊಂಡು ಬೇರೆಯವರೊಂದಿಗೆ ಬೆರೆಯಲು ಪ್ರಯತ್ನಿಸುತ್ತಾರೆ.

ಅಲ್ಲದೇ ಮಕ್ಕಳು ತಮ್ಮನ್ನು ತಾವು ಇತರರ ಮುಂದೆ ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸುವುದನ್ನು ಕಲಿಸಿ. ಅವರಿಗೆ ಸರಿಯಾದ ಪದಗಳ ಬಳಕೆಯನ್ನು ಕಲಿಸಿ. ಇದರಿಂದ ಅವರು ಬೇರೆಯವರೊಂದಿಗೆ ಮುಕ್ತವಾಗಿ ಮಾತನಾಡುತ್ತಾರೆ.

ಹಾಗೇ ಮಕ್ಕಳಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಡಿ. ಅದರಲ್ಲಿ ತಪ್ಪಿದ್ದರೆ ನಿಧಾನವಾಗಿ ತಿಳಿಸಿ ಹೇಳಿ. ಇದರಿಂದ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಇದರಿಂದ ಅವರು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...