Kannada Duniya

ಮಕ್ಕಳ ದಿನಚರಿಗೆ ವೇಳಾಪಟ್ಟಿಯನ್ನು ಈ ರೀತಿಯಾಗಿ ರೂಪಿಸಿ

ಏಕಾಏಕಿ ಮಕ್ಕಳ ಕೈಗೆ ಮೊಬೈಲ್ ನೀಡದೆ ನಿರ್ಬಂಧ ಹೇರುವ ಬದಲು, ಮೊಬೈಲ್ ವೀಕ್ಷಣೆಗೆ ಸಮಯದ ಮಿತಿಯನ್ನು ಹಾಕಿ ಕೊಡಿ. ಮೊಬೈಲ್ ಅಡಿಕ್ಷನ್ ನಿಂದ ಮಕ್ಕಳನ್ನು ಹೊರೆ ತರಲು ಇದು ಅತ್ಯುತ್ತಮ ವಿಧಾನ.

ಮೊಬೈಲ್ ನೀಡುವುದಿಲ್ಲ ಎನ್ನುವ ಬದಲು ವೀಕ್ಷಣೆಗಾಗಿ ವೇಳಾಪಟ್ಟಿಯನ್ನು ರಚಿಸಿದಾಗ ಮಕ್ಕಳು ಅದನ್ನು ಒಪ್ಪಿಕೊಳ್ಳುತ್ತಾರೆ. ಅದೇ ರೀತಿ ಇಡೀ ಕುಟುಂಬ ಒಟ್ಟಾಗಿ ಟಿವಿ ಅಥವಾ ಸಿನಿಮಾ ವೀಕ್ಷಣೆಯ ಸಮಯವನ್ನು ನಿಗದಿಪಡಿಸಿಕೊಳ್ಳಿ. ಎಲ್ಲರೂ ಜೊತೆಯಾಗಿ ಸಮಯ ಕಳೆಯುವಾಗ ಅಥವಾ ಊಟ ಮಾಡುವಾಗ ಫೋನ್ ಅನ್ನು ದೂರವಿಡುವುದು ಮುಖ್ಯ ಎಂಬುದನ್ನು ಮಕ್ಕಳಿಗೂ ತಿಳಿಸಿಕೊಡಿ.

ಅದೇ ರೀತಿ ಮಕ್ಕಳಿಗೆ ಫ್ರೀ ಟೈಮ್ ಇದೆ ಎಂದಾದಾಗ ನೀವು ನಿಮ್ಮ ಕೆಲಸಗಳಿಂದ ವಿರಾಮ ಪಡೆದುಕೊಂಡು ಸೃಜನಶೀಲ ಕೆಲಸಗಳಲ್ಲಿ ಅವರೊಂದಿಗೆ
ತೊಡಗಿಕೊಳ್ಳಿ. ಹೊರಾಂಗಣ ಆಟಗಳಿಗೆ ಆದ್ಯತೆ ನೀಡಿ. ನೀವು ವ್ಯಾಯಾಮ ಮಾಡುವಾಗ ಅಥವಾ ವಾಕಿಂಗ್ ಹೋಗುವಾಗ ಅವರನ್ನು ಕರೆದುಕೊಂಡು ಹೋಗಿ.

ಮಕ್ಕಳು ಟಿವಿ ಅಥವಾ ಮೊಬೈಲ್ ವೀಕ್ಷಣೆಯಿಂದ ಹಲವು ಸಂಗತಿಗಳನ್ನು ಕಲಿಯುತ್ತಾರೆ ಎಂಬುದನ್ನು ಮರೆಯುವಂತಿಲ್ಲ. ಹಾಗಾಗಿ ಸಂಪೂರ್ಣ ನಿಷೇಧ ಹೇರುವ ಬದಲು ಸಮಯಕ್ಕೆ ಮಿತಿ ಹಾಕಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...