Kannada Duniya

ನಿಮ್ಮ ಸಂಬಂಧ ಹಾಳಾಗಲು ಕಾರಣವಾಗುತ್ತೆ ಈ ವಿಚಾರ….!

ಒಂಟಿತನದಿಂದ ಕೆಲವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ಈ ಸಮಸ್ಯೆಗಳು ಎದುರಾಗಬಾರದಂತಿದ್ದರೆ, ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗಬಾರದಂತಿದ್ದರೆ ಕೆಲವು ವಿಷಯಗಳ ಬಗ್ಗೆ ತಿಳಿದಿರಿ.

*ಕೆಲವರು ಇನ್ನೊಬ್ಬರ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಾರೆ, ಅವರು ಸಂಗಾತಿಯು ಏನು ಮಾಡುತ್ತಿದ್ದಾರೆ, ಯಾರ ಜೊತೆ ಮಾತನಾಡುತ್ತಿದ್ದಾರೆ ಎಂದು ಪದೇ ಪದೇ ಕೇಳುತ್ತಾ ಅನುಮಾನ ಪಡುತ್ತಿರುತ್ತಾರೆ. ಇದರಿಂದ ಸಂಬಂಧದಲ್ಲಿ ಬಿರುಕು ಮೂಡುತ್ತದೆ.

 

*ನಿಮ್ಮ ಸಂಗಾತಿಯ ಭೂತಕಾಲದ ವಿಷಯಗಳನ್ನು, ಕೆಟ್ಟ ಘಟನೆಗಳನ್ನು ಪದೇ ಪದೇ ಅವರ ಮುಂದೆ ತರಬೇಡಿ. ಇದರಿಂದ ನಿಮ್ಮ ಸಂಗಾತಿಯ ಮನಸ್ಸು ನೋಯಬಹುದು. ಇಬ್ಬರ ನಡುವೆ ಜಗಳವಾಗಬಹುದು. ಇದರಿಂದ ಸಂಬಂಧ ಮುರಿಯುತ್ತದೆ.

ಚಾಣಕ್ಯ ನೀತಿ: ಮದುವೆಗೆ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ,ಅಂತಹ ವ್ಯಕ್ತಿಯನ್ನು ಮದುವೆಯಾಗಬೇಡಿ…!

*ಯಾವುದೇ ಸಂದರ್ಭದಲ್ಲಿಯೂ ಸಂಗಾತಿಯ ಮೇಲೆ ಕೋಪಿಸಿಕೊಳ್ಳಬೇಡಿ. ಇದರಿಂದ ಅವರು ಏನೇ ಮಾಡಿದರೂ ಅದು ನಿಮಗೆ ಇಷ್ಟವಾಗುವುದಿಲ್ಲ. ಇದರಿಂದ ಇಬ್ಬರ ನಡುವಿನ ಮನಸ್ತಾಪ ಹೆಚ್ಚಾಗಿ ಇದು ಸಂಬಂಧವನ್ನು ಹಾಳುಮಾಡುತ್ತದೆ. ಹಾಗಾಗಿ ಯಾವುದೇ ವಿಚಾರವನ್ನು ಇಬ್ಬರು ಶಾಂತವಾಗಿ ಕುಳಿತು ಚರ್ಚೆ ಮಾಡಿ.

 

* ಯಾವುದೇ ಕಷ್ಟದ ಸಂದರ್ಭಗಳಲ್ಲಿ ಒಬ್ಬರು ಇನ್ನೊಬ್ಬರನ್ನು ಹೀಯಾಳಿಸಬೇಡಿ. ಇದರಿಂದ ಅವರ ಮನಸ್ಸಿಗೆ ಬೇಸರವಾಗುತ್ತದೆ. ಅದರ ಬದಲು ಅವರಿಗೆ ಬೆಂಬಲ ನೀಡಿ. ಅವರ ಸಮಸ್ಯೆಗಳನ್ನು ಪರಿಹಾರಿಸಲು ಸಹಾಯ ಮಾಡಿ.

 

Couples should follow these tips to maintain a healthy relationship with each other during this covid lockdown period


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...