Kannada Duniya

ಸಂಬಂಧವನ್ನು ಹೊಂದುವ ಮುನ್ನ ನಿಮ್ಮನ್ನು ನೀವು ಈ ರೀತಿಯಾಗಿ ‘ಪ್ರಶ್ನಿಸಿ’…!

ಸಂಬಂಧವು ನಿಮಗೆ ಸಂತೋಷವನ್ನು ನೀಡುವಂತಹುದು. ಸಂಬಂಧವನ್ನು ತುಂಬಾ ಎಚ್ಚರಿಕೆಯಿಂದ ನಿಭಾಯಿಸಬೇಕು. ಇಲ್ಲವಾದರೆ ಇಬ್ಬರ ನಡುವೆ ಮನಸ್ತಾಪ ಬಂದು ಸಂಬಂಧ ಮುರಿಯಬಹುದು. ಹಾಗಾಗಿ ನೀವು ಸಂಬಂಧವನ್ನು ಹೊಂದುವ ಮುನ್ನ ನಿಮ್ಮನ್ನು ನೀವು ಈ ರೀತಿಯಾಗಿ ಪ್ರಶ್ನಿಸಿಕೊಳ್ಳಿ.

ನಾನು ಆ ವ್ಯಕ್ತಿಯನ್ನು ನಿಜವಾಗಿಯೂ ಇಷ್ಟಪಡುತ್ತೇನೆಯೇ? ಮೊದಮೊದಲು ನೀವು ವ್ಯಕ್ತಿಯೊಂದಿಗೆ ಇರಲು ಇಷ್ಟಪಡುತ್ತೀರಿ. ಮರುದಿನ ಅವರು ಬೇರೆಯವರೆಂಬ ಭಾವನೆ ಕಾಡುತ್ತದೆ. ಹಾಗಾಗಿ ಇದು ಎಂದಿಗೂ ಒಳ್ಳೆಯ ಭಾವನೆಯಲ್ಲ.

ನಾನು ಅವರ ಬಗ್ಗೆ ಸಾಕಷ್ಟು ಯೋಚಿಸುತ್ತೇನೆಯೇ? ನಾವು ಇಷ್ಟಪಡುವಂತಹ ವ್ಯಕ್ತಿಯ ಬಗ್ಗೆ ಯೋಚನೆಗಳು ಬಹಳ ಖುಷಿ ನೀಡುತ್ತವೆ. ಹಾಗಾಗಿ ನೀವು ಆ ವ್ಯಕ್ತಿಯ ಬಗ್ಗೆ ಯೋಚಿಸುತ್ತೀರಾ ಎಂಬುದನ್ನು ತಿಳಿಯಿರಿ.

ಇದು ನಿಜವಾದ ಅಥವಾ ಮೋಜಿನ ಸಂಬಂಧವೇ? ಎಂದು ಪ್ರಶ್ನಿಸಿ. ಪ್ರತಿಯೊಂದು ಸಂಬಂಧವು ತಿಳಿಯುವುದು ಕಷ್ಟಕರ. ಆದರೂ ನೀವು ನಿಮ್ಮ ಸಂಬಂಧ ಯಾವ ರೀತಿಯದು ಎಂಬುದನ್ನು ತಿಳಿಯಲೇಬೇಕು.

ಅವರು ನಿಮ್ಮ ಮಾಜಿ ಗೆಳೆಯನಂತೆಯೇ ಇದ್ದಾರೆಯೇ ಎಂಬುದನ್ನು ತಿಳಿಯಿರಿ. ನೀವು ಹಿಂದೆ ಸಂಬಂಧವನ್ನು ಹೊಂದಿದ್ದು, ಅವರು ಸ್ವಭಾವ ನಿಮಗೆ ಇಷ್ಟವಾಗದೆ ಸಂಬಂಧ ಮುರಿದಿದ್ದರೆ, ಹೊಸ ಸಂಗಾತಿ ಅದೇರೀತಿ ಸ್ವಭಾವದವರೇ ಎಂಬುದನ್ನು ತಿಳಿಯಿರಿ.

ಸಂಬಂಧದಲ್ಲಿ ಸಂತೋಷವನ್ನು ತರಲು ಸಂಗಾತಿಗೆ ಈ ಭರವಸೆ ನೀಡಿ

ನೀವು ಮತ್ತೊಮ್ಮೆ ಸಂಬಂಧ ಹೊಂದಲು ಬಯಸುತ್ತೀರಾ? ಎಂಬುದನ್ನು ಪ್ರಶ್ನಿಸಿ. ಯಾಕೆಂದರೆ ಹಿಂದಿನ ಸಂಬಂಧದ ಕಹಿ ನೆನಪಿನಿಂದ ನೀವು ಹೊರಗೆ ಬಂದಿದ್ದರೆ ಮುಂದಿನ ಸಂಬಂಧ ಉತ್ತಮವಾಗಿರುತ್ತದೆ. ಇಲ್ಲವಾದರೆ ಸಂಬಂಧ ಮತ್ತೆ ಹಾಳಾಗುತ್ತದೆ. ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.

 

Ask yourself these questons before starting a new relationship


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...