Kannada Duniya

ನಿಮ್ಮ ಮಗು ಬೇರೆಯವರ ಮೇಲೆ ಕೈ ಎತ್ತಲು ಕಾರಣವೇನು ಗೊತ್ತಾ?

ಮಕ್ಕಳು ಬೇರೆಯವರ ಮೇಲೆ ಕೋಪಗೊಂಡು ಅವರ ಮೇಲೆ ಕೆಲವೊಮ್ಮೆ ಕೈ ಎತ್ತಿ ಹೊಡೆಯಲು ಹೋಗುತ್ತಾರೆ. ಇದು ಪೋಷಕರಿಗೆ ಮುಜುಗರವನ್ನುಂಟುಮಾಡುತ್ತದೆ. ಇದರಿಂದ ಅವರು ಚಿಂತೇಗೀಡಾಗುತ್ತಾರೆ. ಆದರೆ ಮಕ್ಕಳ ಈ ವರ್ತನೆಗೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ.

ಮಕ್ಕಳು ತಾವು ಬಯಸಿದ್ದನ್ನು ಪಡೆಯಲು ಯಾವುದೇ ಸುಲಭ ಮಾರ್ಗವನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಆ ಮೂಲಕ ಅವರು ತಮ್ಮ ಕೈಗಳನ್ನು ಎತ್ತಿದರೆ ತಮ್ಮ ಗುರಿಯನ್ನು ಮುಟ್ಟಲು ಸಾಧ್ಯವೆಂದು ಭಾವಿಸುತ್ತಾರೆ.

ಅವರು ವಯಸ್ಕರಂತೆ ಸರಿ ಯಾವುದು ತಪ್ಪು ಯಾವುದೆಂಬುದನ್ನು ತಿಳಿದಿರುವುದಿಲ್ಲ. ಕೈ ಎತ್ತಿ ಹೊಡೆಯುವುದರಿಂದ ಬೇರೆಯವರಿಗೆ ಹಾನಿಯಾಗುತ್ತದೆ ಎಂಬುದು ಅವರಿಗೆ ತಿಳಿಯುವುದಿಲ್ಲ, ಅವರಿಗೆ ತಮ್ಮ ಉದ್ವೇಗವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...